ದೇಶ

ತಮಿಳುನಾಡಿನಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಸುಪ್ರೀಂ ಕೋರ್ಟ್ ಅಸ್ತು, ರಾಜ್ಯ ಸರ್ಕಾರದ ಅರ್ಜಿ ವಜಾ

Lingaraj Badiger

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್ಎಸ್)ದ ಪಥ ಸಂಚಲನಕ್ಕೆ ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್‌ನ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ಸ್ಟಾಲಿನ್ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.

"ಈ ಸಂಬಂಧ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿಥಾಲ್ ಅವರ ಪೀಠ ತೀರ್ಪು ಪ್ರಕಟಿಸುವಾಗ ಹೇಳಿದೆ.

ರಾಜ್ಯ ಸರ್ಕಾರದ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ಎಲ್ಲಾ ಮಾರ್ಗದಲ್ಲೂ ಪಥ ಸಂಚಲನ ನಡೆಸಲು ಸಾಧ್ಯವಿಲ್ಲ ಮತ್ತು ಇದಕ್ಕಾಗಿ ಸಂಘಕ್ಕೆ "ಸ್ಥಾಪಿತ ಹಕ್ಕು" ಇಲ್ಲ ಎಂದು ಪ್ರತಿಪಾದಿಸಿದರು. 

ಇದು ಸಂವಿಧಾನದ ಭಾಗ III ರಲ್ಲಿ ವಿವಿಧ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಎಲ್ಲಿ ಬೇಕಾದರೂ ಪಥ ಸಂಚಲನ ನಡೆಸಬಹುದು ಎಂಬ ನಿರ್ದೇಶನ ಒಪ್ಪಲು ಹೇಗೆ ಸಾಧ್ಯ? ಸ್ವಲ್ಪ ಬ್ಯಾಲೆನ್ಸ್ ಮಾಡಿ ಎಂದು ರೋಹಟಗಿ ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿಯುತ ಸಭೆಗಳನ್ನು ನಡೆಸುವ ಮೂಲಭೂತ ಹಕ್ಕಿಗೆ ಒತ್ತು ನೀಡಿದ ಆರ್ ಎಸ್ಎಸ್ ಪರ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಅವರು, ಈ ಹಿಂದೆ ನಡೆಸಿದ ಮೂರು ಪಥ ಸಂಚಲನಗಳು ಶಾಂತಿಯುತವಾಗಿತ್ತು ಎಂದು ಪ್ರತಿಪಾದಿಸಿದರು.

SCROLL FOR NEXT