ದೇಶ

ದೆಹಲಿ ಅಬಕಾರಿ ಹಗರಣ: 9 ಗಂಟೆಗಳ ವಿಚಾರಣೆ ಬಳಿಕ ಸಿಬಿಐ ಕಚೇರಿಯಿಂದ ತೆರಳಿದ ಕೇಜ್ರಿವಾಲ್

Lingaraj Badiger

ನವದೆಹಲಿ: ದೆಹಲಿ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಪ್ರಕರಣ ಸಂಬಂಧ ಭಾನುವಾರ ದೆಹಲಿ ಮುಖ್ಯಮತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸತತ  9 ಗಂಟೆಗಳ ವಿಚಾರಣೆ ನಡೆಸಿದೆ.

ವಿಚಾರಣೆ ನಂತರ ಅರವಿಂದ್ ಕೇಜ್ರಿವಾಲ್ ಇಂದು ರಾತ್ರಿ 8.30ರ ಸುಮಾರಿಗೆ ದೆಹಲಿಯ ಸಿಬಿಐ ಕೇಂದ್ರ ಕಚೇರಿಯಿಂದ ಮನೆಗೆ ತೆರಳಿದ್ದಾರೆ. 

ಸಿಆರ್ ಪಿಸಿಯ ಸೆಕ್ಷನ್ 161ರ ಅಡಿಯಲ್ಲಿ ದೆಹಲಿ ಸಿಎಂಗೆ ಸಾಕ್ಷಿಯಾಗಿ ಸಿಬಿಐ ಸಮನ್ಸ್ ನೀಡಿದ್ದು, ವಿಚಾರಣೆಗಾಗಿ ಇಂದು ಬೆಳಗ್ಗೆ 11.05 ರ ಸುಮಾರಿಗೆ ದೆಹಲಿಯ ಸಿಬಿಐ ಪ್ರಧಾನ ಕಚೇರಿಗೆ ಆಗಮಿಸಿದ್ದರು.

ಕಿಕ್ ಬ್ಯಾಕ್ ಹಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ‘ಮದ್ಯ ಲಾಬಿ’ಯ ಪರವಾದ ನೀತಿಗಾಗಿ ವಿವಿಧ ಮಧ್ಯವರ್ತಿಗಳಿಂದ ಹಣ ಪಡೆದು ಅದನ್ನು ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ವಿಶೇಷವಾಗಿ ಎಎಪಿ ನಾಯಕರಿಗೆ ಲಂಚ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ಎಎಪಿ ಸ್ಪಷ್ಟವಾಗಿ ನಿರಾಕರಿಸಿದೆ.

SCROLL FOR NEXT