ದೇಶ

ಬಿಜೆಪಿ ಜೊತೆ ಕೈ ಜೋಡಿಸುವ, ಎನ್ ಸಿಪಿ ಶಾಸಕರ ಸಭೆ ಕರೆದಿರುವ ವರದಿ ತಳ್ಳಿಹಾಕಿದ ಅಜಿತ್ ಪವಾರ್

Srinivas Rao BV

ಮುಂಬೈ: ಬಿಜೆಪಿ ಜೊತೆ ಕೈ ಜೋಡಿಸುವ ವಿಷಯದಲ್ಲಿ ತಮ್ಮ ಬಣದ ಶಾಸಕರು ಬೆಂಬಲ ನೀಡಿದ್ದಾರೆ ಹಾಗೂ ಇದೇ ವಿಷಯವಾಗಿ ಎನ್ ಸಿಪಿ ಶಾಸಕರ ಸಭೆ ಕರೆಯಲಾಗಿದೆ ಎಂಬ ವರದಿಗಳನ್ನು ಎನ್ ಸಿಪಿ ನಾಯಕ ಅಜಿತ್ ಪವಾರ್ ತಳ್ಳಿಹಾಕಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಅಜಿತ್ ಪವಾರ್, "ನಾನು ಮಂಗಳವಾರದಂದು ಎನ್ ಸಿಪಿ ಶಾಸಕರ ಸಭೆಯನ್ನು ಕರೆದಿದ್ದೇನೆ ಎಂದು ಕೆಲವು ವರದಿಗಳು ಪ್ರಕಟವಾಗಿದೆ. ಇದು ಸಂಪೂರ್ಣ ತಪ್ಪು ಮಾಹಿತಿ, ನಾನು ಶಾಸಕರ, ಪದಾಧಿಕಾರಿಗಳ ಸಭೆಯನ್ನು ಕರೆದಿಲ್ಲ ಎಂದು ಹೇಳಿದ್ದಾರೆ.

ಇನ್ನು ಎನ್ ಸಿಪಿ ಶಾಸಕರ ಕುರಿತು ವರದಿ ಪ್ರಕಟವಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಜ್ಯಸಭಾ ಸಂಸದ ಸಂಜಯ್ ರೌತ್, ಈ ವರದಿಗಳೆಲ್ಲಾ ಆಧಾರ ರಹಿತವಾಗಿರುವುದಾಗಿದ್ದು, ಅಜಿತ್ ಪವಾರ್ ಹಾಗೂ ಇನ್ನಿತರ ಎನ್ ಸಿಪಿ ನಾಯಕರೊಂದಿಗೆ ನಾನು ಮಾತನಾಡಿದ್ದೇನೆ. "ಇಂತಹ ಕುತಂತ್ರಗಳನ್ನು ಹರಡುವವರು ಮಹಾ ವಿಕಾಸ್ ಅಘಾಡಿ (ಎಂವಿಎ) ಅನ್ನು ದುರ್ಬಲಗೊಳಿಸಬಹುದು ಎಂದು ಭಾವಿಸಿದರೆ, ಅದು ತಪ್ಪು ಎಂದು ಹೇಳಿದ್ದಾರೆ.

ಶರದ್ ಪವಾರ್ ಹಾಗೂ ಅಜಿತ್ ಪವಾರ್ ಇತ್ತೀಚಿನ ದಿನಗಳಲ್ಲಿ ಅದಾನಿ, ಇವಿಎಂ ಸೇರಿದಂತೆ ಹಲವು ರಾಷ್ಟ್ರೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ಬಗ್ಗೆ ಮೃದು ಧೋರಣೆಯಿಂದ ಮಾತನಾಡಿದ್ದು, ಎನ್ ಸಿಪಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಭಾಗವಾಗಲಿದೆ ಎಂಬ ಊಹಾಪೋಹಗಳಿಗೆ ಕಾರಣವಾಗಿತ್ತು.

SCROLL FOR NEXT