ದೇಶ

ಅತೀಕ್ ಅಹ್ಮದ್ ಹತ್ಯೆ ನಂತರ ಉತ್ತರಾಖಂಡದ ಯೋಗಿ ಆದಿತ್ಯನಾಥ್ ಹುಟ್ಟೂರಿನಲ್ಲಿ ಭದ್ರತೆ ಹೆಚ್ಚಳ

Lingaraj Badiger

ಡೆಹ್ರಾಡೂನ್: ಏಪ್ರಿಲ್ 15 ರಂದು ಗ್ಯಾಂಗಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಹತ್ಯೆಯ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹುಟ್ಟೂರು ಉತ್ತರಾಖಂಡದ ಪಂಚೂರ್ ಗ್ರಾಮದಲ್ಲಿ ಅವರ ಕುಟುಂಬ ಸದಸ್ಯರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಅಹ್ಮದ್ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 160 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಉತ್ತರಾಖಂಡದಲ್ಲೂ ಅವರು ಬೆಂಬಲಿಗರನ್ನು ಹೊಂದಿದ್ದರು.

ಸಿಕ್ಕಿರುವ ಮಾಹಿತಿಯ ಪ್ರಕಾರ, ರಾಜ್ಯದ ಪೌರಿ ಜಿಲ್ಲೆಯ ಯಮಕೇಶ್ವರ ಬ್ಲಾಕ್‌ನ ಪಂಚೂರ್ ಗ್ರಾಮದಲ್ಲಿ ಗಸ್ತು ಮತ್ತು ಪೊಲೀಸ್ ಕಾವಲು ಹೆಚ್ಚಿಸಲಾಗಿದೆ. ಇದಲ್ಲದೆ, ರಾಜ್ಯದ ಎಲ್ಲಾ ರೀತಿಯ ಭದ್ರತಾ ವರ್ಗಗಳಾದ ವಿಐಪಿ ಅಥವಾ ವಿವಿಐಪಿಗಳ ಭದ್ರತೆಯನ್ನು ಬಿಗಿಗೊಳಿಸುವಂತೆಯೂ ಸೂಚನೆ ನೀಡಲಾಗಿದೆ.

"ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಕುಟುಂಬ ಸದಸ್ಯರ ಸುರಕ್ಷತೆಗಾಗಿ ವಿಶೇಷ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಯಮಕೇಶ್ವರ ಪೊಲೀಸ್ ಠಾಣೆ ಪೊಲೀಸರಿಗೆ ಅವರ ಗ್ರಾಮದಲ್ಲಿ ವಿಶೇಷ ಗಸ್ತು ಮತ್ತು ಭದ್ರತಾ ಕಣ್ಗಾವಲು ನಡೆಸುವಂತೆ ಸೂಚಿಸಲಾಗಿದೆ ಎಂದು ಪೌರಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ವೇತಾ ಚೌಬೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

SCROLL FOR NEXT