ದೇಶ

ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಡಗರ-ಸಂಭ್ರಮದಿಂದ ಈದ್ ಉಲ್ ಫಿತ್ತರ್ ಆಚರಣೆ

Nagaraja AB

ನವದೆಹಲಿ:ಕರ್ನಾಟಕ ಸೇರಿದಂತೆ ದೇಶಾದ್ಯಂತ ಮುಸ್ಲಿಂ ಬಾಂಧವರು ಸಡಗರ-ಸಂಭ್ರಮದಿಂದ ಈದ್ ಉಲ್ ಫಿತ್ತರ್ ಆಚರಿಸುತ್ತಿದ್ದಾರೆ.

ರಂಜಾನ್ ಉಪವಾಸದ ಕೊನೆಯ ದಿನ ಮುಸ್ಲಿಂರು, ಶಾಂತಿ ಮತ್ತು ಭ್ರಾತೃತ್ವದ ಸಂಕೇತವಾಗಿ ಈ ಹಬ್ಬವನ್ನು ಆಚರಿಸುತ್ತಿದ್ದು, ಹೊಸ ಬಟ್ಟೆ ತೊಟ್ಟು ಮಸೀದಿಗಳಿಗೆ ತೆರಳಿ, ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆ ಮುಗಿಯುತ್ತಲೇ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

ಪಾಟ್ನಾದ ಗಾಂಧಿ ಮೈದಾನಕ್ಕೆ ತೆರಳಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಈದ್ ಉಲ್ ಫಿತರ್ ಆಚರಣೆಯಲ್ಲಿ ಪಾಲ್ಗೊಂಡರು. ಕೇರಳದ  ಕಲ್ನೂರ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಲಯಾಳಂ  ನಟ ಮಮ್ಮೂಟಿ ಮತ್ತು ದುಲ್ಕರ್ ಸಲ್ಮಾನ್ ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು. 

ನವದೆಹಲಿ, ಮುಂಬೈ ಸೇರಿದಂತೆ ದೇಶದ ವಿವಿಧ ಮಸೀದಿಗಳಲ್ಲಿ ಮುಸ್ಲಿಂರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಈ ಮಧ್ಯೆ ನಾಡಿನ ಜನತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಂಜಾನ್ ಹಬ್ಬದ ಶುಭ ಕೋರಿದ್ದಾರೆ. ರಂಜಾನ್ ಹಬ್ಬದ ಸಂದೇಶ ನಮ್ಮೆಲ್ಲರ ನಡೆ-ನುಡಿಯಲ್ಲಿರಲಿ ಎಂದು ತಿಳಿಸಿದ್ದಾರೆ. 

SCROLL FOR NEXT