ದೇಶ

ಪೊಲೀಸ್ ಅಧಿಕಾರಿಯ ತಳ್ಳಿ, ಕಪಾಳಮೋಕ್ಷ ಮಾಡಿದ ವೈಎಸ್‌ಆರ್‌ಟಿಪಿ ಅಧ್ಯಕ್ಷೆ ಶರ್ಮಿಳಾ, ಪ್ರಕರಣ ದಾಖಲು

Manjula VN

ಹೈದರಾಬಾದ್: ಹೊರ ಹೋಗುವಾಗ ಅಡ್ಡಿಪಡಿಸಿದ ಪೊಲೀಸ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮತ್ತು ಇನ್ನೊಬ್ಬ ಮಹಿಳಾ ಪೊಲೀಸ್ ಪೇದೆಯ ಮೇಲೆ ವೈಎಸ್‌ಆರ್‌ಟಿಪಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರು ಹಲ್ಲೆ ನಡೆಸಿದ ಘಟನೆ ಹೈದರಾಬಾದ್ ನಲ್ಲಿ ಸೋಮವಾರ ನಡೆದಿದೆ.

ಪೊಲೀಸರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಬಂಜಾರ ಹಿಲ್ಸ್ ಪೊಲೀಸರು ಶರ್ಮಿಳಾ ಅವರ ವಿರುದ್ಧ ಸರ್ಕಾರಿ ನೌಕರರ ಸೇವೆಗೆ ಅಡ್ಡಿಪಡಿಸಿದ ಆರೋಪ ಮತ್ತು ಇತರೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರು ವಾಹನದ ಬಳಿ ನಿಂತಿರುವ ಸಂದರ್ಭದಲ್ಲಿ ರೋಷದಲ್ಲಿ ಹತ್ತಿರ ಹೋಗಿರುವ ಶರ್ಮಿಳಾ ಅವರು, ಅಧಿಕಾರಿಯನ್ನು ತಳ್ಳಿ, ಕಪಾಳಮೋಕ್ಷ ಮಾಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಬ್ ಇನ್ಸ್ ಪೆಕ್ಟರ್ ರವೀಂದರ್ ಅವರು ಕಾರಿಗೆ ಅಡ್ಡಿಪಡಿಸಿ, ಚಾಲಕನನ್ನು ಹೊರಗೆ ಬರುವಂತೆ ತಿಳಿಸಿದ್ದು, ಈ ವೇಳೆ ಕೆಂಡಾಮಂಡಲಗೊಂಡ ಶರ್ಮಿಳಾ ಅವರು ಅಧಿಕಾರಿಯನ್ನು ತಳ್ಳಿದ್ದಾರೆ.

ವಿಡಿಯೋದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ನನ್ನೇಕೆ ಹೊಡೆಯುತ್ತಿದ್ದೀರಿ ಎಂದು ಪ್ರಶ್ನೆ ಕೇಳಿರುವುದು ಕಂಡು ಬಂದಿದೆ. ಘಡನೆ ಸಂಬಂಧ ಪೊಲೀಸರು ಶರ್ಮಿಳಾ ಅವರನ್ನು ವಶಕ್ಕೆ ಪಡೆದಿದ್ದು, ಬಂಜಾರ ಹಿಲ್ಸ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆಂದು ವರದಿಗಳು ತಿಳಿಸಿವೆ.

SCROLL FOR NEXT