ಪ್ರತಿಭಟನಾ ನಿರತ ಕುಸ್ತಿಪಟುಗಳು 
ದೇಶ

ಮೀಡಿಯಾಗಳು ಆಟಗಾರರ ಬದಲಿಗೆ ಬ್ರಿಜ್ ಭೂಷಣ್ ರನ್ನು ಬೆಂಬಲಿಸುತ್ತಿವೆ: ಪ್ರತಿಭಟನಾ ಕುಸ್ತಿಪಟುಗಳು!

ಕ್ರೀಡಾ ಪಟುಗಳ ಬದಲಿಗೆ ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಅವರನ್ನು ಮಾಧ್ಯಮಗಳು ಬೆಂಬಲಿಸುತ್ತಿವೆ ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ಆರೋಪಿಸಿದ್ದಾರೆ. ಮಾಧ್ಯಮಗಳು ಬ್ರಿಜ್‌ ಭೂಷಣ್‌ ಸಿಂಗ್‌ಗೆ ಮಾತನಾಡಲು ವೇದಿಕೆ ನೀಡಬಾರದು ಎಂದು ಹೇಳಿದೆ.

ನವದೆಹಲಿ: ಕ್ರೀಡಾ ಪಟುಗಳ ಬದಲಿಗೆ ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಅವರನ್ನು ಮಾಧ್ಯಮಗಳು ಬೆಂಬಲಿಸುತ್ತಿವೆ ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ಆರೋಪಿಸಿದ್ದಾರೆ. ಮಾಧ್ಯಮಗಳು ಬ್ರಿಜ್‌ ಭೂಷಣ್‌ ಸಿಂಗ್‌ಗೆ ಮಾತನಾಡಲು ವೇದಿಕೆ ನೀಡಬಾರದು ಎಂದು ಹೇಳಿದೆ.

ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳದ ಆರೋಪಗಳನ್ನು ಎದುರಿಸುತ್ತಿರುವ ಸಿಂಗ್ ಆರೋಪಗಳ ವಿರುದ್ಧ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಈ ಪ್ರತಿಭಟನೆಯನ್ನು ರಾಜಕೀಯ ಪ್ರೇರಿತ ಎಂದು ಕರೆದಿದ್ದಾರೆ. 

ಬಿಜೆಪಿ ಸಂಸದ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಒಂದು ಪೋಕ್ಸೊ ಕಾಯ್ದೆ ಸೇರಿದಂತೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಬ್ರಿಜ್‌ ಭೂಷಣ್‌ ಸಿಂಗ್‌ ಅವರು ಕಳೆದ 12 ವರ್ಷಗಳಿಂದ ಡಬ್ಲ್ಯುಎಫ್‌ಐ ಅಧ್ಯಕ್ಷ ಹುದ್ದೆಯಲ್ಲಿದ್ದಾರೆ. 

ಆಟಗಾರರಿಗಿಂತ ಮಾಧ್ಯಮಗಳು ಬ್ರಿಜ್ ಭೂಷಣ್ ಅವರನ್ನು ಬೆಂಬಲಿಸುತ್ತಿವೆ. ನೀವು ಅವರ ಕ್ರಿಮಿನಲ್ ದಾಖಲೆಗಳನ್ನು ನೋಡುತ್ತೀರಿ. ಇಲ್ಲಿ ಕುಳಿತಿರುವ ಯಾವುದೇ ಆಟಗಾರ ಅಥವಾ ಇತರ ಕ್ರೀಡೆಗಳ ಆಟಗಾರರು ಕ್ರಿಮಿನಲ್ ದಾಖಲೆ ಹೊಂದಿದ್ದಾರೆಯೇ? ಎಂದು ಕುಸ್ತಿಪಟು ಬಜರಂಗ್ ಪುನಿಯಾ ಪ್ರಶ್ನೆ ಮಾಡಿದ್ದಾರೆ. 

ದೇಶದ ಸಂಸತ್ ಸದಸ್ಯನಾಗುವುದಕ್ಕಿಂತ ಒಲಿಂಪಿಕ್ ಪದಕ ಗೆಲ್ಲುವುದು ಹೆಚ್ಚು ಕಷ್ಟಕರವಾಗಿದೆ ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ.

'ಕ್ರೀಡಾಪಟುಗಳು ದೇಶಕ್ಕಾಗಿ ಪದಕಗಳನ್ನು ಗೆಲ್ಲುತ್ತಾರೆ ಮತ್ತು ಅವರು ಪದಕ ವಿಜೇತರ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ದೇಶದಲ್ಲಿ ಎಷ್ಟು ಜನರು ಸಂಸದರಾಗುತ್ತಾರೆ ಮತ್ತು ಎಷ್ಟು ಜನರು ಒಲಿಂಪಿಕ್ ಪದಕಗಳನ್ನು ಗೆಲ್ಲುತ್ತಾರೆ. ಇಲ್ಲಿಯವರೆಗೆ 40 ಒಲಿಂಪಿಕ್ ಪದಕ ವಿಜೇತರು ಮತ್ತು ಸಾವಿರಾರು ಸಂಸದರು ಇದ್ದಾರೆ.

ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್, ಕುಸ್ತಿಪಟುಗಳ ಆರೋಪಗಳು ರಾಜಕೀಯ ಪ್ರೇರಿತ ಎಂದು ಸಿಂಗ್ ಅವರ ಹೇಳಿಕೆ ಆಧಾರರಹಿತವಾಗಿದೆ. ನಾವು ಯಾವುದೇ ರಾಜಕೀಯ ಮಾಡುತ್ತಿಲ್ಲ. ನಾವು ನಮ್ಮ ಹೃದಯದಿಂದ ಮಾತನಾಡುತ್ತೇವೆ ಮತ್ತು ನಮ್ಮೊಂದಿಗೆ ಹಲವಾರು ಜನರು ಇಲ್ಲಿ ಕುಳಿತಿರುವುದಕ್ಕೆ ಇದೇ ಕಾರಣ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT