ದೇಶ

ಸಂಸತ್ತಿನ ಉಭಯ ಸದನಗಳಲ್ಲಿ ಮಣಿಪುರ ವಿವಾದ ಕುರಿತು ಸರ್ಕಾರ ಕಟ್ಟಿ ಹಾಕಲು 'INDIA' ತಂತ್ರ: ಖರ್ಗೆ ನಿವಾಸದಲ್ಲಿ ಇಂದು ಚರ್ಚೆ

Sumana Upadhyaya

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಮುಂದುವರಿಯುತ್ತಿರುವುದರ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಣಿಪುರ ವಿವಾದ ಬಗ್ಗೆ ಹೇಳಿಕೆ ನೀಡಬೇಕೆಂದು ವಿಪಕ್ಷಗಳ ಒತ್ತಾಯ, ಪ್ರತಿಭಟನೆಗಳ ಮಧ್ಯೆ ಉಭಯ ಸದನಗಳಲ್ಲಿ ತೀವ್ರ ಗದ್ದಲ, ಕೋಲಾಹಲ ನಡೆಯುತ್ತಿದೆ.

ಉಭಯ ಸದನಗಳ ಕಲಾಪಗಳು ಸರಾಗವಾಗಿ ಸಾಗದೆ ಮುಂದೂಡಿಕೆಯಾಗುತ್ತಲೇ ಇವೆ. ಯಾವುದೇ ಫಲಪ್ರದ ಚರ್ಚೆಗಳು ನಡೆಯುತ್ತಿಲ್ಲ. ಇಂಡಿಯಾ ಹೆಸರಿನಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಎನ್ ಡಿಎ ಮೈತ್ರಿಕೂಟವನ್ನು ಮಣಿಸಲು ವಿಪಕ್ಷಗಳೆಲ್ಲಾ ಸೇರಿ ಮೈತ್ರಿ ಮಾಡಿಕೊಂಡಿದ್ದು ಮಣಿಪುರ ಹಿಂಸಾಚಾರ ಸಮಸ್ಯೆಯನ್ನು ಬಿಡುವ ಲಕ್ಷಣಗಳು ಕಾಣುತ್ತಿಲ್ಲ.

ಇಂದು ಕಾರ್ಯತಂತ್ರ: ಮುಂಗಾರು ಅಧಿವೇಶನ ಆರಂಭದಿಂದಲೂ ವಿಪಕ್ಷಗಳು ಸರ್ಕಾರವನ್ನು ಕಟ್ಟಿಹಾಕಲು ಕಾರ್ಯತಂತ್ರ ರೂಪಿಸುತ್ತಲೇ ಇವೆ. ಇಂದು ಮತ್ತೆ ರಾಜ್ಯಸಭೆಯ ವಿರೋಧ ಪಕ್ಷ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ನಿವಾಸದಲ್ಲಿ ಸಭೆ ಸೇರಿ ಸದನದಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಆರ್‌ಜೆಡಿ ಸಂಸದ ಮನೋಜ್ ಝಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಅವರು ಮಣಿಪುರದ ಪರಿಸ್ಥಿತಿಯನ್ನು ಸದನದಲ್ಲಿ ಚರ್ಚಿಸಲು ರಾಜ್ಯಸಭೆಯಲ್ಲಿ ನಿಯಮ 267 ರ ಅಡಿಯಲ್ಲಿ ಕಲಾಪವನ್ನು ಅಮಾನತುಗೊಳಿಸುವಂತೆ ನೊಟೀಸ್ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಇಂದು ಕೈಗೆತ್ತಿಕೊಳ್ಳಲಿರುವ ಶಾಸಕಾಂಗ ವ್ಯವಹಾರವು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಕಡಲಾಚೆಯ ಪ್ರದೇಶಗಳ ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2023, ವಕೀಲರ (ತಿದ್ದುಪಡಿ) ಮಸೂದೆ, 2023 ರ ಮಸೂದೆಯನ್ನು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಪ್ರೆಸ್ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಂದ ನಿಯತಕಾಲಿಕಗಳ ನೋಂದಣಿ ಮಸೂದೆ, 2023ಗಳಾಗಿವೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು ಲೋಕಸಭೆಯಲ್ಲಿ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ತಿದ್ದುಪಡಿ) ಮಸೂದೆ, 2023 ನ್ನು ಮಂಡಿಸಲಿದ್ದಾರೆ.ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಂದು ಲೋಕಸಭೆಯಲ್ಲಿ 'ಫಾರ್ಮಸಿ (ತಿದ್ದುಪಡಿ) ಮಸೂದೆ, 2023' ನ್ನು ಮಂಡಿಸಲಿದ್ದಾರೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ 'ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್, 2023' ನ್ನು ಮಂಡಿಸಲಿದ್ದಾರೆ.

SCROLL FOR NEXT