ಮೊಹಲ್ಲಾ ಕ್ಲಿನಿಕ್ ನಲ್ಲಿ ದಿನೇಶ್ ಗುಂಡೂರಾವ್ 
ದೇಶ

ದೆಹಲಿಯ ಮೊಹಲ್ಲಾ ಕ್ಲಿನಿಕ್ ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ; ಸೌಲಭ್ಯ ವೀಕ್ಷಣೆ!

ರಾಷ್ಟ್ರ ರಾಜಧಾನಿಯ ಪಂಚಶೀಲ್ ಪಾರ್ಕ್‌ನಲ್ಲಿರುವ 'ಆಮ್ ಆದ್ಮಿ ಮೊಹಲ್ಲಾ' ಕ್ಲಿನಿಕ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಭೇಟಿ ನೀಡಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿಯ ಪಂಚಶೀಲ್ ಪಾರ್ಕ್‌ನಲ್ಲಿರುವ 'ಆಮ್ ಆದ್ಮಿ ಮೊಹಲ್ಲಾ' ಕ್ಲಿನಿಕ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಭೇಟಿ ನೀಡಿದ್ದಾರೆ. ಗುಂಡೂರಾವ್ ಅವರಿಗೆ ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಮತ್ತು ಕರ್ನಾಟಕ ಭವನದ ವೈದ್ಯಾಧಿಕಾರಿ ಕಾರ್ತಿಕ್ ಸಾಥ್ ನೀಡಿದ್ದು, ಕರ್ನಾಟಕ ಸಚಿವರು ಕ್ಲಿನಿಕ್‌ನಲ್ಲಿರುವ ಸೌಲಭ್ಯಗಳನ್ನು ಗಮನಿಸಿ, ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದರು ಎಂದು ಅದು ಅಧಿಕೃತ ಹೇಳಿಕೆ ತಿಳಿಸಿದೆ. 

ದೆಹಲಿ ಸರ್ಕಾರದ ಮೊಹಲ್ಲಾ ಕ್ಲಿನಿಕ್ ನಿವಾಸಿಗಳಿಗೆ ಉಚಿತ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಮೂಲಕ ಜನಪ್ರಿಯತೆ ಪಡೆದಿವೆ. ಈ ಕ್ಲಿನಿಕ್ ಗಳು ದೆಹಲಿಯಲ್ಲಿ ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಹೆಚ್ಚಿಸುವ ನಿಟ್ಟಿನಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿದೆ.

ಇದೇ ಸಂದರ್ಭದಲ್ಲಿ  ಮೊಹಲ್ಲಾ ಚಿಕಿತ್ಸಾಲಯ ಮಾದರಿಯನ್ನು ಗುಂಡೂರಾವ್ ಶ್ಲಾಘಿಸಿದ್ದು, ಇದು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮೊಹಲ್ಲಾ ಕ್ಲಿನಿಕ್ ಗಳ ಬಗ್ಗೆ ಸಾಕಷ್ಟು ಕೇಳಿದ್ದು, ಅವುಗಳನ್ನು ನೋಡ ಬಯಸಿದ್ದೆ. ಎಎಪಿ ಸರ್ಕಾರ ಹೇಗೆ ಆರೋಗ್ಯ ನೀತಿಗಳನ್ನು ಅನುಷ್ಟಾನಗೊಳಿಸುತ್ತಿದೆ ಎಂಬುದರ ಬಗ್ಗೆ ಚರ್ಚಿಸಲು ಬಯಸುತ್ತೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. 

ತಮಿಳುನಾಡು, ಕೇರಳ ಮತ್ತು ಕರ್ನಾಟಕದಂತಹ ದಕ್ಷಿಣದ ರಾಜ್ಯಗಳಲ್ಲಿ ಆರೋಗ್ಯವು ಯಾವಾಗಲೂ ಆದ್ಯತೆಯಾಗಿದೆ. ಪ್ರತಿಯೊಂದು ರಾಜ್ಯವೂ ನಾವು ಏನಾದರೂ ಕಲಿಯಬಹುದಾದ ಉತ್ತಮವಾದದ್ದನ್ನು ಹೊಂದಿರುತ್ತವೆ. ಮೊಹಲ್ಲಾ ಕ್ಲಿನಿಕ್ ಗಳಂತೆ ನಮ್ಮಲ್ಲಿಯೂ ನಮ್ಮ ಕ್ಲಿನಿಕ್ ಗಳಿಗೆವೆ. ಅವುಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆ ಎದುರು ನೋಡುತ್ತಿದ್ದೇವೆ ಎಂದರು. 

ಕರ್ನಾಟಕದಲ್ಲಿನ ಉತ್ತಮ ಆಸ್ಪತ್ರೆಗಳ ಬಗ್ಗೆ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕರ್ನಾಟಕಕ್ಕೂ ನಾವು ಭೇಟಿ ನೀಡುತ್ತೇವೆ. ಪ್ರತಿಯೊಂದು ರಾಜ್ಯವೂ ಪರಸ್ಪರ ನೋಡಿ ಕಲಿಬೇಕು. ಅವರು ಇಲ್ಲಿಗೆ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಭಾರದ್ವಾಜ್ ಹೇಳಿದರು. 

ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್. ಕರ್ನಾಟಕದ ಆರೋಗ್ಯ ಸಚಿವರು ದೆಹಲಿ ಮೊಹಲ್ಲಾ ಕ್ಲಿನಿಕ್‌ಗಳಿಗೆ ಭೇಟಿ ನೀಡಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ. ನಾವೆಲ್ಲರೂ ಪರಸ್ಪರ ಕಲಿಯಬೇಕಾಗಿದೆ. ಕರ್ನಾಟಕ ಸರ್ಕಾರ ಮಾಡಿದ ಒಳ್ಳೆಯ ಕೆಲಸಗಳಿಂದ ಪ್ರೇರಿತಗೊಂಡು ದೆಹಲಿ ಕೂಡ ಕಲಿಯುತ್ತದೆ ಎಂದು ಹೇಳಿದ್ದಾರೆ.

ಪ್ರಸ್ತುತ, ರಾಷ್ಟ್ರ ರಾಜಧಾನಿಯಲ್ಲಿ 500 ಕ್ಕೂ ಹೆಚ್ಚು ಮೊಹಲ್ಲಾ ಚಿಕಿತ್ಸಾಲಯಗಳು ರೋಗಿಗಳಿಗೆ ಉಚಿತ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುತ್ತವೆ, ಇದರಲ್ಲಿ 212 ವಿವಿಧ ರೀತಿಯ ವೈದ್ಯಕೀಯ ಪರೀಕ್ಷೆಗಳು ಸೇರಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: CM ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಹೃದಯ ಛಿದ್ರವಾಗಿದೆ: ಆಫ್ರಿಕಾ ವಿರುದ್ಧದ ಸರಣಿ ಹೀನಾಯ ಸೋಲಿನ ನಂತರ ಇಡೀ ದೇಶದ ಕ್ಷಮೆಯಾಚಿಸಿದ ರಿಷಭ್ ಪಂತ್!

WPL Auction 2026: ಬರೋಬ್ಬರಿ 3.2 ಕೋಟಿ ರೂ. ಗೆ ಆಲ್ ರೌಂಡರ್ ದೀಪ್ತಿ ಶರ್ಮಾ ಸೋಲ್ಡೌಟ್‌! ಸ್ಟನ್ ಆದ ಗಂಗೂಲಿ

ತಮಿಳುನಾಡು-ಆಂಧ್ರ ತೀರಕ್ಕೆ ದಿತ್ವಾ ಚಂಡಮಾರುತ: ಬೆಂಗಳೂರು ಸೇರಿ ಕರ್ನಾಟಕದಲ್ಲಿ 4 ದಿನ ಭಾರೀ ಮಳೆ ಸಾಧ್ಯತೆ; IMD ಎಚ್ಚರಿಕೆ

SCROLL FOR NEXT