ದೇಶ

ಮಣಿಪುರ ಹಿಂಸಾಚಾರ ಸಂತ್ರಸ್ತರಿಗೆ ಪರಿಹಾರ: ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್ ನಿಂದ ತ್ರಿ ಸದಸ್ಯ ಸಮಿತಿ

Srinivas Rao BV

ನವದೆಹಲಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ತೀವ್ರವಾಗಿರುವ ಪರಿಣಾಮ, ಸುಪ್ರೀಂ ಕೋರ್ಟ್ ಪರಿಹಾರದ ಮೇಲ್ವಿಚಾರಣೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿದೆ. 

ಸಮಿತಿಯಲ್ಲಿ ಹೈಕೋರ್ಟ್ ನ ಮೂವರು ಮಹಿಳಾ ನ್ಯಾಯಾಧೀಶರು ಇರಲಿದ್ದು, ಪರಿಹಾರ ಹಾಗೂ ಪುನರ್ವಸತಿ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿದೆಯೇ? ಎಂಬ ಬಗ್ಗೆ ಮೇಲ್ವಿಚಾರಣೆ ನಡೆಸಲಿದ್ದಾರೆ. 

ಜಮ್ಮು-ಕಾಶ್ಮೀರ ಹೈಕೋರ್ಟ್ ಸಿಜೆ ಗೀತಾ ಮಿತ್ತಲ್ ಹಾಗೂ ನಿವೃತ್ತ ನ್ಯಾಯ ಮೂರ್ತಿಗಳಾದ ಶಾಲಿನಿ ಪಿ ಜೋಷಿ ಹಾಗೂ ಆಶಾ ಮೆನನ್ ಅವರು ಸಮಿತಿಯಲ್ಲಿರಲಿದ್ದಾರೆ ಎಂದು ಸಿಜೆಐ ಡಿವೈ ಚಂದ್ರಚೂಡ್ ಹೇಳಿದ್ದಾರೆ.

ರಾಜ್ಯದಲ್ಲಿ ಕಾನೂನು ಮತ್ತು ನಿಯಮಗಳ ಮೇಲೆ ನಂಬಿಕೆ ಮೂಡುವಂತೆ ಮಾಡಲು ಸುಪ್ರೀಂ ಕೋರ್ಟ್ ಯತ್ನಿಸುತ್ತಿದೆ ಎಂದು ಸಿಜೆಐ ನೇತೃತ್ವದ ಪೀಠ ಹೇಳಿದೆ. 

SCROLL FOR NEXT