ದೇಶ

ಸಂಸತ್ ಭವನದಲ್ಲಿ ಬಿಜೆಪಿ ಸಂಸದರಿಂದ 'ಕ್ವಿಟ್ ಇಂಡಿಯಾ' ಸ್ಮರಣಾರ್ಥ ಪ್ರತಿಭಟನಾ ಕಾರ್ಯಕ್ರಮ

Shilpa D

ನವದೆಹಲಿ: ಭಾರತ ಬಿಟ್ಟು ತೊಲಗಿ ಚಳುವಳಿ ಸ್ಮರಣಾರ್ಥ ಬಿಜೆಪಿ ಸಂಸದರು ಕಾರ್ಯಕ್ರಮ ಆಯೋಜಿಸಿದ್ದರು. ವಂಶಾಡಳಿತ ರಾಜಕಾರಣ, ಭ್ರಷ್ಟಾಚಾರ ಮತ್ತು ತುಷ್ಟೀಕರಣ ರಾಜಕಾರಣವನ್ನು ದೇಶದಿಂದ ತೊಲಗಿಸಬೇಕೆಂದು ಬಿಜೆಪಿ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಮತ್ತು INDIA ಮಿತ್ರಪಕ್ಷಗಳ ವಿರುದ್ಧ  ದಾಳಿ ನಡೆಸಿದ ಬಿಜೆಪಿ ಮುಖಂಡರು, ಭ್ರಷ್ಟಾಚಾರ ಮತ್ತು ತುಷ್ಟೀಕರಣದ ರಾಜಕೀಯವನ್ನು ತೊಡೆದುಹಾಕಲು ಕರೆ ನೀಡಿದರು. ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ನಡೆದ ಹಲವಾರು ಹಗರಣಗಳ ಬಗ್ಗೆ ಮಾತನಾಡಿದರು, ಹಾಗೆಯೇ ಟಿಎಂಸಿ, ಆರ್‌ಜೆಡಿ, ಡಿಎಂಕೆ, ಟಿಆರ್‌ಎಸ್ ಆಡಳಿತವಿರುವ ರಾಜ್ಯಗಳಲ್ಲಿ ವಂಶಾಡಳಿತ ರಾಜಕೀಯ, ಭ್ರಷ್ಟಾಚಾರ ಮತ್ತು ತುಷ್ಟೀಕರಣ ತೊಡೆದು ಹಾಕಬೇಕು ಎಂದು ಹೇಳಿದರು.

ವಂಶಾಡಳಿತ ರಾಜಕೀಯ, ಭ್ರಷ್ಟಾಚಾರ ಮತ್ತು ತುಷ್ಟೀಕರಣ ಭಾರತವನ್ನು ತೊರೆಯಬೇಕಾದ "ಮೂರು ದುಷ್ಪರಿಣಾಮಗಳು" ಎಂದು ಅವರು ಹೇಳಿದರು. ಭಾರತದ ಹಿತದೃಷ್ಟಿಯಿಂದ, ಅದರ ಭದ್ರತೆ, ಸಮಗ್ರತೆಗಾಗಿ ಭಾರತವನ್ನು ತೊರೆಯುವುದು ಬಹಳ ಮುಖ್ಯ ಎಂದು ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.

ದೇಶದ ಪ್ರಜಾಸತ್ತಾತ್ಮಕ ರಚನೆಯನ್ನು ಕಾಪಾಡಬೇಕಾದರೆ, ರಾಜಕೀಯದಲ್ಲಿ ಆರ್ಥಿಕ ಸಾಮರ್ಥ್ಯ ಮರಳಿ ತಂದು ದೇಶವನ್ನು ಉಳಿಸಬೇಕಾದರೆ, ಈ ಮೂರು ಶಾಪಗಳು ಭಾರತವನ್ನು ತೊರೆಯಬೇಕು ಎಂದು ಅವರು ಹೇಳಿದರು. 1942 ರಲ್ಲಿ ಮಹಾತ್ಮ ಗಾಂಧಿಯವರು ಆರಂಭಿಸಿದ ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭಿಸಿದರು.

SCROLL FOR NEXT