ಸಾಂದರ್ಭಿಕ ಚಿತ್ರ 
ದೇಶ

ಸೈಬರ್ ಭದ್ರತೆಗೆ ಭಾರತೀಯ ರಕ್ಷಣಾ ಸಚಿವಾಲಯದಿಂದ 'ಮಾಯಾ OS' ಅಳವಡಿಕೆ

ಭಾರತದ ರಕ್ಷಣಾ ಸಚಿವಾಲಯದ ಕಂಪ್ಯೂಟರ್ ವ್ಯವಸ್ಥೆಗಳನ್ನು ಹ್ಯಾಕ್ ಮಾಡುವ ಹ್ಯಾಕರ್‌ ಗಳ ಸಮಸ್ಯೆಯನ್ನು ಎದುರಿಸಲು ಸಚಿವಾಲಯ ಮುಂದಾಗಿದೆ. ಮೂಲಗಳ ಪ್ರಕಾರ ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಮ್ ನ್ನು ಕೈಬಿಡಲು ಮತ್ತು ಮಾಯಾ ಎಂಬ ಸ್ಥಳೀಯ ನಿರ್ವಹಣೆ ವ್ಯವಸ್ಥೆಯನ್ನು ಅಳವಡಿಸಲು ಸಚಿವಾಲಯ ನಿರ್ಧರಿಸಿದೆ.

ನವದೆಹಲಿ: ಭಾರತದ ರಕ್ಷಣಾ ಸಚಿವಾಲಯದ ಕಂಪ್ಯೂಟರ್ ವ್ಯವಸ್ಥೆಗಳನ್ನು ಹ್ಯಾಕ್ ಮಾಡುವ ಹ್ಯಾಕರ್‌ ಗಳ ಸಮಸ್ಯೆಯನ್ನು ಎದುರಿಸಲು ಸಚಿವಾಲಯ ಮುಂದಾಗಿದೆ. ಮೂಲಗಳ ಪ್ರಕಾರ ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಮ್ ನ್ನು ಕೈಬಿಡಲು ಮತ್ತು ಮಾಯಾ ಎಂಬ ಸ್ಥಳೀಯ ನಿರ್ವಹಣೆ ವ್ಯವಸ್ಥೆಯನ್ನು ಅಳವಡಿಸಲು ಸಚಿವಾಲಯ ನಿರ್ಧರಿಸಿದೆ. ಪ್ರಾಯೋಗಿಕ ಆಧಾರದ ಮೇಲೆ, ಸಚಿವಾಲಯದ ಕೆಲವು ಕಂಪ್ಯೂಟರ್‌ಗಳಲ್ಲಿ ಮಾಯಾ ಒಎಸ್ ನ್ನು ಆಗಸ್ಟ್ 15 ರೊಳಗೆ ಸ್ಥಾಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮುಕ್ತ ಮೂಲಗಳ ಆಧಾರಿತ ಹೊಸ ನಿರ್ವಹಣೆ ವ್ಯವಸ್ಥೆ ಸೈಬರ್ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಸಚಿವಾಲಯ ಮೂಲಗಳು ಹೇಳುತ್ತವೆ. ಸಚಿವಾಲಯವು ಅದಕ್ಕೆ ಸಂಪರ್ಕಗೊಂಡಿರುವ ಎಲ್ಲಾ ವ್ಯವಸ್ಥೆಗಳಲ್ಲಿ ಮಾಯಾವನ್ನು ಅಳವಡಿಸಲು ಬಯಸುತ್ತದೆ. ಮಾಯಾ ಒಎಸ್ ನ್ನು ಆರು ತಿಂಗಳಲ್ಲಿ ಸರ್ಕಾರಿ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು 'ಎಂಡ್‌ಪಾಯಿಂಟ್ ಡಿಟೆಕ್ಷನ್ ಮತ್ತು ಪ್ರೊಟೆಕ್ಷನ್' ಗಾಗಿ ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ನೌಕಾಪಡೆಯು ತಮ್ಮ ವ್ಯವಸ್ಥೆಗಳಲ್ಲಿ ಮಾಯಾ ಒಎಸ್ ನ್ನು ಅಳವಡಿಸಲು ನಿರ್ಧರಿಸಿದೆ. ಭೂ ಸೇನೆ ಮತ್ತು ವಾಯುಪಡೆಯು ಅದನ್ನು ಮೌಲ್ಯಮಾಪನ ಮಾಡುತ್ತಿದೆ. ಸೈಬರ್ ವಾರ್‌ಫೇರ್‌ನ ಸಾಮರ್ಥ್ಯ ಮತ್ತು ಸೈಬರ್ ದಾಳಿ, ಬೇಹುಗಾರಿಕೆ ಮತ್ತು ದಾಖಲೆ ಅಂಕಿಅಂಶ ಕಳ್ಳತನದ ಸಾಧ್ಯತೆಗಳನ್ನು ಪರಿಗಣಿಸಿ ಏಪ್ರಿಲ್‌ನಲ್ಲಿ ಸೇನೆಯು ಎಲ್ಲಾ ಆರು ಆಪರೇಟಿಂಗ್ ಕಮಾಂಡ್‌ಗಳಲ್ಲಿ ಮೀಸಲಾದ ಇಂಟರ್ನೆಟ್ ನೆಟ್‌ವರ್ಕ್‌ಗಳನ್ನು ಹೆಚ್ಚಿಸಲು ಕ್ರಮಗಳನ್ನು ಪ್ರಾರಂಭಿಸಿದೆ. 

ಮೇ ತಿಂಗಳಲ್ಲಿ ಡಿಫೆನ್ಸ್ ಸೈಬರ್ ಏಜೆನ್ಸಿಯು ಸೈಬರ್ ಸೆಕ್ಯುರಿಟಿ ಡ್ರಿಲ್‌ಗಳನ್ನು ನಡೆಸಿತು, ಇದರಲ್ಲಿ ರಾಷ್ಟ್ರೀಯ ಭದ್ರತೆಯ ವಿವಿಧ ಶಾಖೆಗಳ ಭಾಗವಹಿಸುವಿಕೆ ಸೇರಿದೆ. ದೇಶದ ಪ್ರಮುಖ ಮೂಲಸೌಕರ್ಯವನ್ನು ರಕ್ಷಿಸಲು ಸೇವೆಯಲ್ಲಿರುವ ಫೈರ್‌ವಾಲ್‌ಗಳ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವುದು ಇದರ ಉದ್ದೇಶವಾಗಿತ್ತು. 

ಭಾರತದ ರಕ್ಷಣಾ ವಲಯದ ಮೇಲೆ ಚೀನಾದ ಪಾತ್ರವನ್ನು ಬಹಿರಂಗಪಡಿಸಿದ ನಂತರ ಅಂತಹ ದಾಳಿಗಳನ್ನು ಒಳಗೊಂಡಿರುವ ಮತ್ತು ಸೈಬರ್‌ ಇನ್‌ಫ್ರಾಸ್ಟ್ರಕ್ಚರ್ ನ್ನು ರಕ್ಷಿಸುವ ಕ್ರಮಗಳು ವೇಗವನ್ನು ಪಡೆದುಕೊಂಡವು. ನವೆಂಬರ್ 2022 ರಲ್ಲಿ, ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಐದು ಸರ್ವರ್‌ಗಳ ಮೇಲೆ ನಡೆದ ಸೈಬರ್‌ಟಾಕ್ ಚೀನಾ ಮೂಲದ ಹ್ಯಾಕರ್‌ಗಳನ್ನು ತೋರಿಸಿದೆ. 

ಸೈಬರ್‌ಸ್ಪೇಸ್ ಜಾಗತಿಕವಾಗಿ ಹ್ಯಾಕರ್‌ಗಳ ದಾಳಿಗೆ ಹೆಚ್ಚು ಗುರಿಯಾಗುತ್ತಿದೆ. 2023ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತವೊಂದರಲ್ಲೇ 500 ಮಿಲಿಯನ್ ಹ್ಯಾಕರ್ ದಾಳಿಗಳು ವರದಿಯಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT