ರಾಹುಲ್ ಗಾಂಧಿ ಭಾಷಣ 
ದೇಶ

ಸಂಸತ್ತಿನಲ್ಲಿ 'ಭಾರತ್ ಮಾತಾ ಕಿ ಹತ್ಯಾ' ಎಂದು ಹೇಳಬಾರದು: ಕೇಂದ್ರ ಸರ್ಕಾರ

ಅಧೀರ್ ರಂಜನ್ ಚೌಧರಿ ಸರ್ಕಾರದ ಕಡೆಗೆ ಬೊಟ್ಟು ಮಾಡುವ ಕಡೆಗೆ ಮೊದಲು ಸ್ಪೀಕರ್ ಮತ್ತು ಸಂಸದ್ ಟಿವಿಯ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕು. ನಿನ್ನೆ ರಾಹುಲ್ ಗಾಂಧಿ ಭಾಷಣ ಮಾಡುವಾಗ ಎಂದಿಗೂ ವಿಚಲಿತರಾಗಲಿಲ್ಲ, ಆದರೆ 'ಭಾರತ್ ಮಾತಾ ಕಿ ಹತ್ಯೆ' ಎಂಬ ಪದವನ್ನು ಸಂಸತ್ತಿನಲ್ಲಿ ಬಳಸುವಂತಿಲ್ಲ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘಾವಾಲ್ ಪ್ರತಿಕ್ರಿಯಿಸಿದ್ದಾರೆ. 

ನವದೆಹಲಿ: ರಾಹುಲ್ ಗಾಂಧಿ ಸದನದಲ್ಲಿ ನಿನ್ನೆ ನೀಡಿರುವ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಅಸಂಸದೀಯ ಪದವಾಗಿದ್ದರೆ ಅದನ್ನು ತೆಗೆದುಹಾಕಲು ಅವಕಾಶವಿದೆ, ರಾಹುಲ್ ಗಾಂಧಿ ಅಂತಹ ಯಾವುದೇ ಅಸಂಸದೀಯ ಹೇಳಿಕೆ ನೀಡಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ಭಾರತ ಮಾತೆಯನ್ನು ಅವಮಾನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ವಿಷಯವನ್ನು ಲೋಕಸಭೆ ಸ್ಪೀಕರ್‌ಗೆ ತಿಳಿಸಿದ್ದೇನೆ ಮತ್ತು ಅವರು ಈ ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಅಧೀರ್ ರಂಜನ್ ಚೌಧರಿ ಸರ್ಕಾರದ ಕಡೆಗೆ ಬೊಟ್ಟು ಮಾಡುವ ಕಡೆಗೆ ಮೊದಲು ಸ್ಪೀಕರ್ ಮತ್ತು ಸಂಸದ್ ಟಿವಿಯ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕು. ನಿನ್ನೆ ರಾಹುಲ್ ಗಾಂಧಿ ಭಾಷಣ ಮಾಡುವಾಗ ಎಂದಿಗೂ ವಿಚಲಿತರಾಗಲಿಲ್ಲ, ಆದರೆ 'ಭಾರತ್ ಮಾತಾ ಕಿ ಹತ್ಯೆ' ಎಂಬ ಪದವನ್ನು ಸಂಸತ್ತಿನಲ್ಲಿ ಬಳಸುವಂತಿಲ್ಲ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘಾವಾಲ್ ಪ್ರತಿಕ್ರಿಯಿಸಿದ್ದಾರೆ. 

ಮಣಿಪುರದ ಹಿಂಸಾಚಾರವನ್ನು ನಿಭಾಯಿಸಿದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹರಿಹಾಯ್ದರು. ಬಿಜೆಪಿ ರಾಜಕೀಯ ಆ  ರಾಜ್ಯದಲ್ಲಿ 'ಭಾರತ ಮಾತೆಯನ್ನು ಕೊಂದಿದೆ' ಎಂದು ಆರೋಪಿಸಿದಾಗ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಸ್ಮೃತಿ ಅವರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಯಿತು. 

ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಎರಡನೇ ದಿನದ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯು ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ಆಡಳಿತ ಪಕ್ಷದ ಸದಸ್ಯರು ಭಾರತದ 'ರಕ್ಷಕರಲ್ಲ' ಎಂದು ಗಾಂಧಿ ಹೇಳಿದಾಗ, ಗೃಹ ಸಚಿವ ಶಾ ಮಣಿಪುರದಲ್ಲಿ ಶಾಂತಿಗಾಗಿ ಮನವಿ ಮಾಡಿದರು ಅಲ್ಲದೇ, ಜನಾಂಗೀಯ ಹಿಂಸಾಚಾರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮೈಟೈ ಸಮುದಾಯಗಳೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT