ಸ್ವಾತಿ ಮಲಿವಾಲ್ 
ದೇಶ

DCWನ 181 ಸಹಾಯವಾಣಿಗೆ ಒಂದು ವರ್ಷದಲ್ಲಿ 6.3 ಲಕ್ಷಕ್ಕೂ ಹೆಚ್ಚು ಕರೆಗಳು ಬಂದಿವೆ: ಸ್ವಾತಿ ಮಲಿವಾಲ್

ದೆಹಲಿ ಮಹಿಳಾ ಆಯೋಗ(DCW)ದ 181 ಸಹಾಯವಾಣಿಗೆ ಜುಲೈ 2022 ರಿಂದ ಜೂನ್ 2023 ರ ವರೆಗೆ 6.30 ಲಕ್ಷಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಶನಿವಾರ ಹೇಳಿದ್ದಾರೆ.

ನವದೆಹಲಿ: ದೆಹಲಿ ಮಹಿಳಾ ಆಯೋಗ(DCW)ದ 181 ಸಹಾಯವಾಣಿಗೆ ಜುಲೈ 2022 ರಿಂದ ಜೂನ್ 2023 ರ ವರೆಗೆ 6.30 ಲಕ್ಷಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಶನಿವಾರ ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಲಿವಾಲ್, ಕಳೆದ ಒಂದು ವರ್ಷದಲ್ಲಿ ಗೃಹ ಹಿಂಸೆ, ನೆರೆಹೊರೆಯವರೊಂದಿಗೆ ಸಂಘರ್ಷ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ, ಪೋಕ್ಸೊ, ಅಪಹರಣ ಹಾಗೂ ಸೈಬರ್ ಅಪರಾಧಗಳಂತಹ 92,004" ವಿಶಿಷ್ಟ ಪ್ರಕರಣಗಳು" ಸಹಾಯವಾಣಿ ಮೂಲಕ ದಾಖಲಾಗಿವೆ ಎಂದು ತಿಳಿಸಿದ್ದಾರೆ.

“ನಾವು DCW ನ ಮಹಿಳಾ ಸಹಾಯವಾಣಿ 181ರ ವಾರ್ಷಿಕ ಡೇಟಾವನ್ನು ಬಿಡುಗಡೆ ಮಾಡಿದ್ದೇವೆ. ಡೇಟಾದಲ್ಲಿ, DCWನ 181 ಸಹಾಯವಾಣಿಯು ಕಳೆದ 7 ವರ್ಷಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದೆ. ಕಳೆದ ವರ್ಷ  6,30,000 ಕರೆಗಳು ಬಂದಿವೆ ಎಂದು ಅವರು ಹೇಳಿದ್ದಾರೆ.

181, 24X7 ಹಾಟ್‌ಲೈನ್ ಆಗಿದ್ದು, ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗಲು DCW ಈ ಸಹಾಯವಾಣಿ ಆರಂಭಿಸಿದೆ.

ಕರೆ ಮಾಡಿದವರಿಗೆ ಸಮಾಲೋಚನೆ ನೀಡಲಾಗುತ್ತದೆ ಮತ್ತು ಅಗತ್ಯವಿದ್ದರೆ, ದೆಹಲಿ ಪೊಲೀಸ್, ಆಸ್ಪತ್ರೆಗಳು ಮತ್ತು ಆಶ್ರಯ ಮನೆಗಳಂತಹ ಕುಂದುಕೊರತೆಗಳನ್ನು ಗುರುತಿಸಿ ಪರಿಹರಿಸುತ್ತದೆ. 

ಹೆಚ್ಚಿನ ಸಂದರ್ಭಗಳಲ್ಲಿ, ಅವರಿಗೆ ಸಹಾಯ ಮಾಡಲು ಸಂಕಷ್ಟದಲ್ಲಿರುವ ಮಹಿಳೆಯರನ್ನು ಭೇಟಿ ಮಾಡಲು ಸಲಹೆಗಾರರ ತಂಡವನ್ನು ಸಹ ಡಿಸಿಡಬ್ಲ್ಯು ಕಳುಹಿಸಿಕೊಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT