ದಿವಂಗತ ನಟಿ ಶ್ರೀದೇವಿಗೆ ಗೂಗಲ್ ಡೂಡಲ್ ಗೌರವ 
ದೇಶ

60ನೇ ಜನ್ಮ ದಿನಾಚರಣೆ: ದಿವಂಗತ ನಟಿ ಶ್ರೀದೇವಿಗೆ ಗೂಗಲ್ ಡೂಡಲ್ ಗೌರವ

ಭಾರತದ ಸೂಪರ್ ಸ್ಟಾರ್ ನಟಿ ದಿವಗಂತ ಶ್ರೀದೇವಿ ಅವರ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಗೂಗಲ್ ಇಂಡಿಯಾ ಅವರಿಗೆ ಗೌರವ ಸಲ್ಲಿಸಿದೆ. 

ನವದೆಹಲಿ: ಭಾರತದ ಸೂಪರ್ ಸ್ಟಾರ್ ನಟಿ ದಿವಗಂತ ಶ್ರೀದೇವಿ ಅವರ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಗೂಗಲ್ ಇಂಡಿಯಾ ಅವರಿಗೆ ಗೌರವ ಸಲ್ಲಿಸಿದೆ. 

ಜನ್ಮದಿನಾಚರಣೆ ಭಾಗವಾಗಿ ಗೂಗಲ್ ಶ್ರೀದೇವಿ ಅವರಿಗೆ ಸಂಬಂಧಿಸಿದ ಡೂಡಲ್ ಸಮರ್ಪಿಸಿದ್ದು, ಶ್ರೀದೇವಿ ಅವರು ಸಾಂಪ್ರದಾಯಿಕ ಉಡುಗೆಯಲ್ಲಿರುವ ಕೈತುಂಬ ಬಳೆಗಳನ್ನು ತೊಟ್ಟಿರುವ ಚಿತ್ರವನ್ನು ಡೂಡಲ್ ಆಗಿ ಚಿತ್ರಿಸಿದೆ. ಆ ಡೂಡಲ್ ನೋಡಿದ ನೆಟಿಜನ್‌ಗಳು ಶ್ರೀದೇವಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ ಮತ್ತು ಅವರ ಮತ್ತು ಅವರ ಚಲನಚಿತ್ರಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದಾರೆ.

ಶ್ರೀದೇವಿ ಜನಿಸಿದ್ದು 1963ರ ಆಗಸ್ಟ್​ 13ರಂದು. ಅವರು ನಮ್ಮೊಂದಿಗೆ ಇದ್ದಿದ್ದರೆ ಇಂದು 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ಅವರು ಇಹಲೋಕ ತ್ಯಜಿಸಿ 5 ವರ್ಷ ಕಳೆದಿದೆ. ಅವರು ಭೌತಿಕವಾಗಿ ಇಲ್ಲದಿದ್ದರೂ ಸಿನಿಮಾಗಳ ಮೂಲಕ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.

ಶ್ರೀದೇವಿ ಅವರು ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ವಿಶೇಷ ಇಮೇಜ್ ಅನ್ನು ಸೃಷ್ಟಿಸಿದ ನಟಿ. ಒಂದು ಕಾಲದಲ್ಲಿ ಚಿತ್ರೋದ್ಯಮದಲ್ಲಿ ಏಕೈಕ ನಟಿಯಾಗಿ ಮಿಂಚಿದ್ದರು. ಹಿರಿಯ ಎನ್ಟಿಆರ್ ಸೇರಿದಂತೆ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ. ತಮಿಳು ಚಿತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶ್ರೀದೇವಿ ನಂತರ ದಕ್ಷಿಣ ಭಾರತ ಮತ್ತು ಅನೇಕ ಭಾರತೀಯ ಭಾಷೆಗಳಲ್ಲಿ ನಟಿಸಿದ್ದಾರೆ.

ಶ್ರೀದೇವಿ ಅವರು ವೇಟಗಾಡು, ಬೊಬ್ಬುಲಿ ಪುಲಿ, ಕ್ಷಣ ಸಂಶಂ, ಪ್ರೇಮಾಭಿಷೇಕಂ, ಕಂಚುಕಾಗದ, ಆಖಾರಿಪೋರಾಟಂ, ಜಗದೇಕವೀರುಡು ಅತಿಲೋಕ ಸುಂದರಿ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT