ದೇಶ

ತರ್ನ್ ತರನ್‌ನಿಂದ ಡ್ರೋನ್ ವಶ; ಅಮೃತಸರ, ಫಿರೋಜ್‌ಪುರದಿಂದ 3 ಕೆಜಿಗೂ ಅಧಿಕ ಹೆರಾಯಿನ್ ವಶ

Ramyashree GN

ಚಂಡೀಗಢ: ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಸಮೀಪವಿರುವ ಬಾವಿಯಿಂದ ಭಾನುವಾರ ಡ್ರೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತ್ಯೇಕ ಘಟನೆಗಳಲ್ಲಿ ಫಿರೋಜ್‌ಪುರ ಮತ್ತು ಅಮೃತಸರದಿಂದ ಮೂರು ಕೆಜಿಗೂ ಅಧಿಕ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸುಳಿವಿನ ಮೇರೆಗೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಡೆಗಳು ಮತ್ತು ಪಂಜಾಬ್ ಪೊಲೀಸ್ ಅಧಿಕಾರಿಗಳು ತರ್ನ್ ತರನ್‌ನ ಲಖ್ನಾ ಗ್ರಾಮದ ಹೊರವಲಯದಲ್ಲಿ ಭಾನುವಾರ ಜಂಟಿ ಶೋಧ ಕಾರ್ಯಾಚರಣೆ ನಡೆಸಿದರು.

ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಡ್ರೋನ್ (ಕ್ವಾಡ್ಕಾಪ್ಟರ್) ಪತ್ತೆಯಾಗಿದೆ. ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಬಾವಿಯಲ್ಲಿ ಮುರಿದ ಸ್ಥಿತಿಯಲ್ಲಿ ಇರಿಸಲಾಗಿತ್ತು ಎಂದು ಅವರು ಹೇಳಿದರು.

'ಖಚಿತ ಮಾಹಿತಿ ಮೇರೆಗೆ ಪಂಜಾಬ್ ಬಿಎಸ್ಎಫ್ ಪಡೆ ಮತ್ತು ಪಂಜಾಬ್ ಪೊಲೀಸರು ಫಿರೋಜ್‌ಪುರದ ಮಚಿವಾರ ಗ್ರಾಮದ ಬಳಿಯ ಕೃಷಿ ಭೂಮಿಯಿಂದ ಅಂದಾಜು 3 ಕೆಜಿ ತೂಕದ 3 ಹೆರಾಯಿನ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದೆ' ಎಂದು ಬಿಎಸ್ಎಫ್ ಟ್ವೀಟ್ ಮಾಡಿದೆ.

ಬಿಎಸ್ಎಫ್ ಪಡೆಗಳು ಅಮೃತಸರ ಜಿಲ್ಲೆಯ ಧನೋ ಕಲನ್ ಗ್ರಾಮದಲ್ಲಿ 530 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT