ನವದೆಹಲಿ: ಕಳೆದ ಕೆಲವು ವಾರಗಳಿಂದ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಮಣಿಪುರದ ಪರಿಸ್ಥಿತಿ ಇದೀಗ ಸುಧಾರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ ಮತ್ತು ಅಲ್ಲಿ ಪುನಃಸ್ಥಾಪಿಸಲು ಈಶಾನ್ಯ ರಾಜ್ಯದ ಜನರನ್ನು ಒತ್ತಾಯಿಸಿದರು.
ಕೆಂಪು ಕೋಟೆಯ ಆವರಣದಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಡೀ ರಾಷ್ಟ್ರವು ಮಣಿಪುರದೊಂದಿಗೆ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಈ ಪ್ರಯತ್ನಗಳನ್ನು ಮುಂದುವರಿಸುತ್ತದೆ ಎಂದು ಹೇಳಿದರು.
'ಕಳೆದ ಕೆಲವು ವಾರಗಳಲ್ಲಿ, ಈಶಾನ್ಯ ರಾಜ್ಯದಲ್ಲಿ ನಡೆದ ಹಿಂಸಾಚಾರದ ಅವಧಿಯಲ್ಲಿ, ವಿಶೇಷವಾಗಿ ಮಣಿಪುರದಲ್ಲಿ, ಅನೇಕ ಜನರು ಪ್ರಾಣ ಕಳೆದುಕೊಂಡರು. ನಮ್ಮ ತಾಯಿ ಮತ್ತು ಹೆಣ್ಣುಮಕ್ಕಳ ಗೌರವಕ್ಕೆ ಕುಂದುಂಟಾಯಿತು. ಆದರೆ, ಕಳೆದ ಕೆಲವು ದಿನಗಳಲ್ಲಿ ಅಲ್ಲಿ ಪರಿಸ್ಥಿತಿ ಶಾಂತಗೊಳ್ಳುತ್ತಿದೆ' ಎಂದರು.
ರಾಷ್ಟ್ರವು ಮಣಿಪುರದೊಂದಿಗೆ ಇದೆ ಎಂದು ಪ್ರಧಾನಮಂತ್ರಿಯವರು ಕೆಂಪು ಕೋಟೆಯಿಂದ ತಮ್ಮ ಸತತ 10ನೇ ಸ್ವಾತಂತ್ರ್ಯೋತ್ವವದ ಭಾಷಣದ ಆರಂಭದಲ್ಲಿ ಹೇಳಿದರು.
ಇದನ್ನೂ ಓದಿ: ದೇಶದಾದ್ಯಂತ 77ನೇ ಸ್ವಾತಂತ್ರ್ಯೋತ್ಸವ: ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ, ಭಾಷಣದಲ್ಲಿ ಮಣಿಪುರ ವಿಚಾರ ಪ್ರಸ್ತಾಪ
'ಮಣಿಪುರದಲ್ಲಿ ಕಳೆದ ಕೆಲವು ದಿನಗಳಿಂದ ಪರಿಸ್ಥಿತಿ ಶಾಂತವಾಗುತ್ತಿದ್ದು, ಜನರು ಅಲ್ಲಿ ಶಾಂತಿಯನ್ನು ಪುನಃಸ್ಥಾಪಿಸಬೇಕು. ಮಣಿಪುರದಲ್ಲಿನ ಸಮಸ್ಯೆಗಳಿಗೆ ಶಾಂತಿಯ ಮೂಲಕ ಪರಿಹಾರದ ಮಾರ್ಗವನ್ನು ಕಂಡುಕೊಳ್ಳಲಾಗುವುದು' ಎಂದು ಪ್ರಧಾನಿ ಹೇಳಿದರು.