ದೇಶ

ಗುಜರಾತ್: ಪೊಲೀಸ್ ದಾಳಿ ವೇಳೆ ಗುಂಪು ದಾಳಿ, ವಾಹನ ಜಖಂ; 9 ಮಂದಿ ಬಂಧನ

Srinivas Rao BV

ಅಹ್ಮದಾಬಾದ್: ಗುಜರಾತ್ ನ ದಹೋದ್ ಜಿಲ್ಲೆಯಲ್ಲಿ ಹಸುಗಳನ್ನು ಕಸಾಯಿಖಾನೆಗೆ ಕರೆದೊಯ್ಯುತ್ತಿದ್ದಗ ನಡೆದ ಪೊಲೀಸ್ ದಾಳಿ ವೇಳೆ ಅವುಗಳನ್ನು ವಶಕ್ಕೆ ಪಡೆಯಲಾಗಿದ್ದು, ಗುಂಪು ದಾಳಿ ನಡೆದಿದ್ದು, ಹಲವು ವಾಹನಗಳು ಜಖಂಗೊಂಡಿದೆ. 

50 ಪೊಲೀಸ್ ಸಿಬ್ಬಂದಿಗಳು ಕಪ್ಡಿ ಪ್ರದೇಶದಲ್ಲಿ ದಾಳಿ ನಡೆಸಿದೆ.  ಪೊಲೀಸ್ ಸಿಬ್ಬಂದಿಗಳು 5 ಕಿ.ಮೀ ನಷ್ಟು ಬೀಫ್ ಹಾಗೂ ಮಾಂಸಕ್ಕಾಗಿ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಹಸುಗಳನ್ನು ರಕ್ಷಿಸಲಾಗಿದೆ.  ದಾಳಿ ನಡೆದ ಬಳಿಕ ಪೊಲೀಸ್ ತಂಡ ವಾಪಸ್ಸಾಗುತ್ತಿದ್ದ ವೇಳೆ, 150 ಮಂದಿ ಇದ್ದ ಗುಂಪು ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿತು. ಈ ಘಟನೆಯಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ತಲೆಗೆ ಗಾಯಗಳಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ದೇವ್ಘರ್ ಬಾರಿಯಾ ಇನ್ಸ್ ಪೆಕ್ಟರ್ ಸಿಆರ್ ದೇಸಾಯಿ ತಿಳಿಸಿದ್ದಾರೆ.

20 ಮಂದಿ ಗುರುತು ಪತ್ತೆ ಮಾಡಲಾಗಿರುವ ವ್ಯಕ್ತಿಗಳು ಹಾಗೂ 130 ಅನಾಮಿಕ ವ್ಯಕ್ತಿಗಳ ವಿರುದ್ಧ ಗಲಭೆ ಉಂಟುಮಾಡಿದ್ದಕ್ಕಾಗಿ ಹತ್ಯೆ ಯತ್ನ ಹಾಗೂ ಇತರ ಆರೋಪಗಳನ್ನು ಹೊರಿಸಿ ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ 9 ಮಂದಿಯನ್ನು ಬಂಧಿಸಲಾಗಿದೆ.

ಗುಜರಾತ್ ಪ್ರಾಣಿ ಸಂರಕ್ಷಣಾ ತಿದ್ದುಪಡಿ ಕಾಯ್ದೆಯಡಿ ಮತ್ತೊಂದು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

SCROLL FOR NEXT