ದೇಶ

ಸಿಬಿಐ ಡಿಐಜಿ ಮೋಹಿತ್ ಗುಪ್ತಾ, ಇಬ್ಬರು ಎಸ್ಪಿಗಳ ಅಧಿಕಾರಾವಧಿ ವಿಸ್ತರಿಸಿದ ಕೇಂದ್ರ

Lingaraj Badiger

ನವದೆಹಲಿ: ಕೇಂದ್ರಿಯ ತನಿಖಾ ಸಂಸ್ಥೆ(ಸಿಬಿಐ) ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್(ಡಿಐಜಿ) ಮೋಹಿತ್ ಗುಪ್ತಾ ಅವರ ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರ ಮಂಗಳವಾರ ಮುಂದಿನ ವರ್ಷ ಸೆಪ್ಟೆಂಬರ್‌ವರೆಗೆ ವಿಸ್ತರಿಸಿದೆ ಎಂದು ಅಧಿಕೃತ ಆದೇಶ ತಿಳಿಸಿದೆ.

ಗುಪ್ತಾ ಅವರು ಉತ್ತರ ಪ್ರದೇಶ ಕೇಡರ್‌ನ 2006ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಸಕ್ಷಮ ಪ್ರಾಧಿಕಾರವು ಸಿಬಿಐ ಡಿಐಜಿ ಗುಪ್ತಾ ಅವರ ಅಧಿಕಾರಾವಧಿಯನ್ನು ಸೆಪ್ಟೆಂಬರ್ 4, 2023 ರಿಂದ ಸೆಪ್ಟೆಂಬರ್ 3, 2024 ರವರೆಗೆ ಒಂದು ವರ್ಷದವರೆಗೆ ಅವಧಿಗೆ ವಿಸ್ತರಿಸಲು ಅನುಮೋದನೆ ನೀಡಿದೆ ಎಂದು ಸಿಬ್ಬಂದಿ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಸಿಬಿಐ ಪೊಲೀಸ್ ವರಿಷ್ಠಾಧಿಕಾರಿಗಳಾದ ರಘುರಾಮರಾಜನ್ ಎ ಮತ್ತು ವಿದ್ಯುತ್ ವಿಕಾಶ್ ಅವರ ಅವಧಿಯನ್ನು ಸಹ ವಿಸ್ತರಿಸಲಾಗಿದೆ.

ನಾಗಾಲ್ಯಾಂಡ್ ಕೇಡರ್‌ನ 2012ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ ರಘುರಾಮರಾಜನ್ ಅವರನ್ನು ಸೆಪ್ಟೆಂಬರ್ 16, 2023 ರಿಂದ ಸೆಪ್ಟೆಂಬರ್ 15, 2025 ರವರೆಗೆ ಎರಡು ವರ್ಷಗಳ ಕಾಲ ಸಿಬಿಐ ಎಸ್‌ಪಿಯಾಗಿ ಅವಧಿ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇನ್ನು ಭಾರತೀಯ ಕಂದಾಯ ಸೇವೆಯ(ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್) 2008ನೇ ಬ್ಯಾಚ್ ನ ಅಧಿಕಾರಿ ವಿಕಾಶ್ ಅವರ ಅಧಿಕಾರಾವಧಿಯನ್ನು ಸೆಪ್ಟೆಂಬರ್ 1, 2023 ರಿಂದ ಫೆಬ್ರವರಿ 19, 2024 ರವರೆಗೆ ವಿಸ್ತರಿಸಲಾಗಿದೆ.

SCROLL FOR NEXT