ದೇಶ

ಪಾಕ್ ಧ್ವಜ ಮಾರಾಟ: ಅಮೇಜಾನ್ ಕಚೇರಿಯ ಮೇಲೆ ಎಂಎನ್ಎಸ್ ದಾಳಿ!

Srinivas Rao BV

ಮುಂಬೈ: ಪಾಕಿಸ್ತಾನದ ಧ್ವಜ ಹಾಗೂ ಪುಸ್ತಕಗಳನ್ನು ಮಾರಾಟ ಮಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಅಮೇಜಾನ್ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪಿಸಿ ನಾಗ್ಪುರದ ಅಮೇಜಾನ್ ಕಚೇರಿ ಮೇಲೆ ಎಂಎನ್ಎಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. 

ಗಣೇಶ್ ಪೇಟ್ ಪ್ರದೇಶದಲ್ಲಿರುವ ಅಮೇಜಾನ್ ಕಚೇರಿಗೆ ನುಗ್ಗಿದ ವ್ಯಕ್ತಿಗಳ ಗುಂಪೊಂದು ಲೂಟಿ ಮಾಡಿದ್ದಾರೆ. 

ಅಮೇಜಾನ್ ಇಂಡಿಯಾ ಲಿಮಿಟೆಡ್ ಗೆ ಉದ್ದೇಶಿಸಿ ಬರೆದಿರುವ ಪತ್ರಕ್ಕೆ ಎಂಎನ್ಎಸ್ ನಾಯಕರಾದ ಚಂದು ಲಾಡೆ ಹಾಗೂ ವಿಶಾಲ್ ಬಗ್ಡೆ ಸಹಿ ಮಾಡಿದ್ದು, ಅಮೇಜಾನ್ ನ ವೆಬ್ ಸೈಟ್ ನಲ್ಲಿ ಪಾಕಿಸ್ತಾನದ ಧ್ವಜ ಮಾರಾಟಕ್ಕೆ ಲಭ್ಯವಿದೆ, ಇಂತಹ ವಸ್ತುಗಳನ್ನು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರು ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಇದಷ್ಟೇ ಅಲ್ಲದೇ ಅಮೇಜಾನ್ ವೆಬ್ ಸೈಟ್ ನಲ್ಲಿ ಮಾರಾಟ ಮಾಡಲಾಗುತ್ತಿರುವ ಡೆಡ್ಲಿ ಭಗವದ್ಗೀತಾ ಎಂಬ ಭಗವದ್ಗೀತೆಗೆ ಅವಹೇಳನ ಮಾಡುವ ಪುಸ್ತಕವನ್ನೂ ವೆಬ್ ಸೈಟ್ ನಿಂದ ತೆಗೆದುಹಾಕಬೇಕೆಂದು ಪತ್ರದ ಮೂಲಕ ಆಗ್ರಹಿಸಲಾಗಿದೆ. 
 

SCROLL FOR NEXT