ದೇಶ

100 ಎಲ್ ಸಿಎ ತೇಜಸ್ ಫೈಟರ್ಸ್ ಗಳನ್ನು ಸೇರ್ಪಡೆಗೊಳಿಸಿಕೊಳ್ಳಲು ಐಎಎಫ್ ಮುಂದು

Srinivas Rao BV

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಫೈಟರ್ ಗಳಿಗೆ ಹೆಚ್ಚಿನ ಮಹತ್ವ ನೀಡುವುದರ ಭಾಗವಾಗಿ ಭಾರತೀಯ ವಾಯುಪಡೆ ಎಲ್ ಸಿಎ ತೇಜಸ್ ನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆಯತ್ತ ಕಾರ್ಯನಿರ್ವಹಿಸುತ್ತಿದೆ.

ಮೂಲಗಳ ಪ್ರಕಾರ ಐಎಎಫ್ 100 ಎಲ್ ಸಿಎ ತೇಜಸ್ ಎಂಕೆ-1ಎ ಫೈಟರ್ ಗಳನ್ನು ಸೇರ್ಪಡೆಗೊಳಿಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಈಗ ಯೋಜನೆ ರೂಪಿಸಲಾಗುತ್ತಿದೆ.

ಈ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತದೆ. ಈ ಐಎಎಫ್ ನ ಈ ಯೋಜನೆಯು ಸ್ಥಳೀಯ ಯುದ್ಧ ವೇದಿಕೆಗಳ ಪ್ರೊಫೈಲ್ ಅನ್ನು ಹೆಚ್ಚಿಸುವುದಾಗಿದೆ. ಜೊತೆಗೆ HAL ತನ್ನ ಅಸೆಂಬ್ಲಿ ಲೈನ್‌ಗಳನ್ನು ಜೀವಂತವಾಗಿಡಲು ಸಂಪನ್ಮೂಲಗಳನ್ನು ಕ್ರೋಡೀಕರಿಸುವುದು ಮಾತ್ರವಲ್ಲದೆ ಹೆಚ್ಚು ಸ್ಥಳೀಯವಾಗಿ ತಯಾರಿಸಿದ ಯುದ್ಧ ವ್ಯವಸ್ಥೆಗಳನ್ನು ಸೇರಿಸುವುದು ದೀರ್ಘಾವಧಿಯ ಯೋಜನೆಯ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.

ತೇಜಸ್ ನ ಈ ಹೊಸ ವಿಮಾನಗಳು ಮಿಗ್ G 21 ಫೈಟರ್ ಜೆಟ್‌ಗಳ ಸ್ಕ್ವಾಡ್ರನ್‌ಗಳ ಬದಲಿಗೆ ಕಾರ್ಯನಿರ್ವಹಿಸಲಿವೆ.

ನಿಗದಿತ 15 ವರ್ಷಗಳಲ್ಲಿ ಈ ಆದೇಶವನ್ನು ಪೂರ್ಣಗೊಳಿಸಿದ ನಂತರ, IAF 40 LCA, 180 LCA ಮಾರ್ಕ್-1A ಮತ್ತು ಕನಿಷ್ಠ 120 LCA ಮಾರ್ಕ್-2 ವಿಮಾನಗಳನ್ನು ಹೊಂದಿರುತ್ತದೆ.
 

SCROLL FOR NEXT