ದೇಶ

ಮಣಿಪುರದಲ್ಲಿ ಹಿಂಸಾಚಾರ: ವಿಧಾನಸಭೆ ಅಧಿವೇಶನ ಮುಂದೂಡುವಂತೆ ಬುಡಕಟ್ಟು ಸಂಘಟನೆಗಳ ಆಗ್ರಹ

Lingaraj Badiger

ಗುವಾಹಟಿ: ಜನಾಂಗೀಯ ಹಿಂಸಾಚಾರ ಪೀಡಿತ ರಾಜ್ಯ ಸಹಜ ಸ್ಥಿತಿಗೆ ಮರಳುವವರೆಗೆ ಆಗಸ್ಟ್ 29ಕ್ಕೆ ನಿಗದಿಯಾಗಿರುವ ವಿಧಾನಸಭೆ ಅಧಿವೇಶನವನ್ನು ಮುಂದೂಡುವಂತೆ ಭಾನುವಾರ ಮಣಿಪುರದ ಎರಡು ಬುಡಕಟ್ಟು ಸಂಘಟನೆಗಳು ಆಗ್ರಹಿಸಿವೆ.

ಬುಡಕಟ್ಟು ಏಕತೆ ಸಮಿತಿ ಮತ್ತು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ, ಆಗಸ್ಟ್ 29 ರಂದು ವಿಧಾನಸಭೆ ಅಧಿವೇಶನ ಕರೆದಿರುವುದನ್ನು ಖಂಡಿಸಿವೆ. ಪ್ರಸ್ತುತ ಪರಿಸ್ಥಿತಿಯು ಕುಕಿ-ಜೋನ 10 ಶಾಸಕರು ಅಧಿವೇಶನಕ್ಕೆ ಹಾಜರಾಗಲು ಅನುಕೂಲಕರವಾಗಿಲ್ಲ ಎಂದು ಹೇಳಿವೆ.

ಅಲ್ಪಸಂಖ್ಯಾತ ಬುಡಕಟ್ಟು ಜನರ ಭಾವನೆಗಳನ್ನು ಪರಿಗಣಿಸದೆ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದರೆ, ಅದರಿಂದ ಉಂಟಾಗುವ ಯಾವುದೇ ಅಹಿತಕರ ಘಟನೆಗೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಸಂಘಟನೆಗಳು ಎಚ್ಚರಿಸಿವೆ.

ರಾಜ್ಯದಲ್ಲಿ "ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಆಡಳಿತದ ಸಂಪೂರ್ಣ ವಿಫಲವಾಗಿದೆ. ಇಂತಹ ಸಮಯದಲ್ಲಿ ವಿಧಾನಸಭೆ ಅಧಿವೇಶನ ಕರೆಯುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

“2023 ರ ಮೇ 3 ರಿಂದ ಆರಂಭವಾದ ಜನಾಂಗೀಯ ಹಿಂಸಾಚಾರ ಇಂಫಾಲ್ ಕಣಿವೆಯ ನೂರಕ್ಕೂ ಹೆಚ್ಚು ಮುಗ್ಧ ಕುಕಿ-ಜೋ ಜನರ ಹತ್ಯೆಗೆ ಸಾಕ್ಷಿಯಾಗಿದೆ ಮತ್ತು ನೂರಾರು ಚರ್ಚ್‌ಗಳು ಮತ್ತು ಕ್ವಾಟರ್ಸ್ ಗಳು ಸೇರಿದಂತೆ ಸಾವಿರಾರು ಮನೆಗಳನ್ನು ನಾಶಪಡಿಸಲಾಗಿದೆ. ಸಚಿವರು ಮತ್ತು ಶಾಸಕರ ಪ್ರಾಣ ಮತ್ತು ಆಸ್ತಿಯನ್ನು ಸಹ ಹಾನಿ ಮಾಡಲಾಗಿದೆ ಎಂದು ಸಂಘಟನೆಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿವೆ.

SCROLL FOR NEXT