ದೇಶ

ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿನ ನಡುವೆಯೂ ಮಿಶ್ರಾ ಸೇರಿ 12 ಹಾಲಿ ಸಚಿವರ ಸೋಲು!

Srinivas Rao BV

ಭೋಪಾಲ್: ಮಧ್ಯಪ್ರದೇಶದಲ್ಲಿ 163 ಸ್ಥಾನಗಳಲ್ಲಿ ಗೆದ್ದು ಅಧಿಕಾರವನ್ನು ಉಳಿಸಿಕೊಂಡಿದೆ. ಆದರೆ ಶಿವರಾಜ್ ಸಿಂಗ್ ಚೌವ್ಹಾಣ್ ಅವರ ಸಚಿವ ಸಂಪುಟದ 12 ಸಚಿವರು ಸೋತಿದ್ದಾರೆ.

ಗೃಹ ಸಚಿವ ನರೋತ್ತಮ್ ಮಿಶ್ರಾ ಸಹ ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ದಾಟಿಯಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಭಾರ್ತಿ ವಿರುದ್ಧ 7,742 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಸಚಿವರಾದ ಅರವಿಂದ ಭದೋರಿಯಾ ಅಟೆರ್ ಕ್ಷೇತ್ರದಲ್ಲಿ, ಹರ್ದಾ ಹಾಗೂ ಗೌರಿಶಂಕರ್ ಬಿಸೆನ್, ಬಾಲಘಾಟ್ ನಲ್ಲಿ ಸೋತಿರುವ ಇನ್ನಿತರ ಸಚಿವರಾಗಿದ್ದಾರೆ.

ಬದ್ವಾನಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರೇಮ್ ಸಿಂಗ್ ಪಟೇಲ್, ಮಹೇಂದ್ರ ಸಿಂಗ್ ಸಿಸೋಡಿಯಾ ಬಮೋರಿ, ರಾಜ್ಯವರ್ಧನ್ ಸಿಂಗ್ ದತ್ತಿಗಾಂವ್ ಬದ್ನಾವರ್, ಭರತ್ ಸಿಂಗ್ ಕುಶ್ವಾಹ ಗ್ವಾಲಿಯರ್ ಗ್ರಾಮೀಣ ಭಾಗದಿಂದ, ಅಮರ್‌ಪತನ್‌ನಿಂದ ರಾಮ್‌ಖೇಲವಾನ್ ಪಟೇಲ್ ಮತ್ತು ಪೊಹ್ರಿಯಿಂದ ಸುರೇಶ್ ಧಕಡ್ ವಿಜೇತ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.

ಸಿಸೋಡಿಯಾ ಹಾಗೂ ದತ್ತಿಗಾಂವ್ ಕೇಂದ್ರ ಪ್ರಯಾಣಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಪ್ತರಾಗಿದ್ದಾರೆ.

ದತ್ತಿಗಾಂವ್ ಅವರು ಚುನಾವಣೆಗೂ ಸ್ವಲ್ಪ ದಿನಗಳ ಮುನ್ನ ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಭನ್ವರ್ ಸಿಂಗ್ ಶೇಖಾವತ್ ಅವರ ಎದುರು ಪರಾಭವಗೊಂಡಿದ್ದಾರೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರ ಸೋದರಳಿಯ ರಾಹುಲ್ ಸಿಂಗ್ ಲೋಧಿ ಅವರು ಖರ್ಗಾಪುರದಲ್ಲಿ ಸೋಲು ಕಂಡಿದ್ದಾರೆ. ಮತ್ತೊಬ್ಬ ಸಚಿವ ರಾಮ್ ಕಿಶೋರ್ ಕಾವ್ರೆ ಕೂಡ ಪರಸ್ವಾಡದಿಂದ ಸೋಲು ಕಂಡಿದ್ದಾರೆ.

ಸಿಂಧಿಯಾ ಅವರ ಮತ್ತೋರ್ವ ಆಪ್ತರಾದ ಬಿಜೆಪಿ ಅಭ್ಯರ್ಥಿ ಇಮರ್ತಿ ದೇವಿ ಸಹ ಸುರೇಶ್ ರಾಜೆ ವಿರುದ್ಧ ದಬ್ರಾ ವಿಧಾನಸಭಾ ಕ್ಷೇತ್ರದಲ್ಲಿ 2,267 ಮತಗಳ ಅಂತರದಿಂದ ಸೋತಿದ್ದಾರೆ. ಇನ್ನು ಬಿಜೆಪಿಯ ಸತ್ನಾ ಕ್ಷೇತ್ರದ ಸಂಸದರೂ ಆಗಿರುವ ಗಣೇಶ್ ಸಿಂಗ್ ಸಹ ಸೋಲು ಕಂಡಿದ್ದಾರೆ.

SCROLL FOR NEXT