ದೇಶ

ಯುಸಿಒ ಬ್ಯಾಂಕ್ ಒಳಗೊಂಡ 820 ಕೋಟಿ ರೂ. ವಹಿವಾಟು ಪ್ರಕರಣ: ಪಶ್ಚಿಮ ಬಂಗಾಳ, ಕರ್ನಾಟಕದಲ್ಲಿ ಸಿಬಿಐ ದಾಳಿ

Srinivas Rao BV

ಪಶ್ಚಿಮ ಬಂಗಾಳ: ಯುಸಿಒ ಬ್ಯಾಂಕ್ ನ್ನೊಳಗೊಂಡ 820 ಕೋಟಿ ರೂಪಾಯಿ ಮೌಲ್ಯದ ಪ್ರಕರಣವೊಂದರಲ್ಲಿ ಸಿಬಿಐ ಡಿ.05 ರಂದು ಕರ್ನಾಟಕ ಹಾಗೂ ಪಶ್ಚಿಮ ಬಂಗಾಳದಲ್ಲಿ 13 ಕಡೆಗಳಲ್ಲಿ ದಾಳಿ ನಡೆಸಿದೆ.

ವ್ಯಕ್ತಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಆರೋಪಿಗಳ ನಿವಾಸ, ಅವರಿಗೆ ಸೇರಿದ ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕೋಲ್ಕತ್ತಾ ಹಾಗೂ ಮಂಗಳೂರಿನಲ್ಲಿ ಈ ದಾಳಿ ನಡೆದಿದೆ. ಶೋಧಕಾರ್ಯಾಚರಣೆ ವೇಳೆ ಮೊಬೈಲ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಸಿಸ್ಟಮ್, ಇ-ಮೇಲ್ ಆರ್ಕೈವ್ ಗಳು, ಡೆಬಿಟ್/ ಕ್ರೆಡಿಟ್ ಕಾರ್ಡ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ.

UCO ಬ್ಯಾಂಕ್‌ನಿಂದ ಬಂದ ದೂರಿನ ಮೇರೆಗೆ UCO ಬ್ಯಾಂಕ್‌ನೊಂದಿಗೆ ಕೆಲಸ ಮಾಡುವ ಇಬ್ಬರು ಬೆಂಬಲ ಇಂಜಿನಿಯರ್‌ಗಳು ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಸುಮಾರು 820 ಕೋಟಿ ರೂಪಾಯಿ ಮೊತ್ತದ ಅನುಮಾನಾಸ್ಪದ ತಕ್ಷಣದ ಪಾವತಿ ಸೇವೆ (IMPS) ವ್ಯವಹಾರದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

SCROLL FOR NEXT