ದೇಶ

ಮೆಹುಲ್ ಚೋಕ್ಸಿ ವಿರುದ್ಧದ ವಂಚನೆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ನಿಂದ ಮರು ಜೀವ!

Srinivas Rao BV

ನವದೆಹಲಿ: ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧದ ವಂಚನೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮರುಸ್ಥಾಪಿಸಿದೆ. 

2017 ರಲ್ಲಿ ಗುಜರಾತ್ ಹೈಕೋರ್ಟ್ ಚೋಕ್ಸಿ ವಿರುದ್ಧ ಗುಜರಾತ್ ಪೊಲೀಸರು ದಾಖಲಿಸಿದ್ದ ಎಫ್ಐಆರ್ ನ್ನು ರದ್ದುಗೊಳಿಸಿತ್ತು.

2015ರಲ್ಲಿ ಗುಜರಾತ್‌ನಲ್ಲಿ ದೂರುದಾರ ದಿಗ್ವಿಜಯ್‌ಸಿಂಗ್ ಹಿಮ್ಮತ್‌ಸಿನ್ಹ ಜಡೇಜಾ ದಾಖಲಿಸಿರುವ ಎಫ್‌ಐಆರ್‌ನ ಪ್ರಕಾರ, ಚೋಕ್ಸಿ ಮತ್ತು ಅವರ ಪತ್ನಿ 30 ಕೋಟಿ ರೂಪಾಯಿ ಮೌಲ್ಯದ 24 ಕ್ಯಾರೆಟ್ ಶುದ್ಧ ಚಿನ್ನದ ತುಂಡುಗಳನ್ನು ಒಳಗೊಂಡ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ನಕಲಿ ಮತ್ತು ವಂಚನೆ ಆರೋಪದ ಮೇಲೆ ಆರೋಪಿಯಾಗಿದ್ದಾರೆ.

ಚೋಕ್ಸಿ ವಿರುದ್ಧದ ಎಫ್ಐಆರ್ ನ್ನು ಮೇ 5, 2017 ರ ಹೈ ಕೋರ್ಟ್ ರದ್ದುಗೊಳಿಸಿತ್ತು.  ಆದರೆ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ಚೋಕ್ಸಿ ವಿರುದ್ಧ ತನಿಖೆಯನ್ನು ಮುಂದುವರಿಸಲು ಪೊಲೀಸರನ್ನು ಕೇಳಿದೆ.

ಆಕ್ಷೇಪಾರ್ಹ ತೀರ್ಪು ಅಥವಾ ಪ್ರಸ್ತುತ ಆದೇಶದಲ್ಲಿ ಮಾಡಲಾದ ಯಾವುದೇ ಅಂಶಗಳ ಪ್ರಭಾವವಿಲ್ಲದೆ, ತನಿಖೆ ಮುಂದುವರೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

SCROLL FOR NEXT