ದೇಶ

ಮೌನ ಮುರಿದ ಸಮಾಜವಾದಿ ಪಕ್ಷ: ಹಿಂದೂ ಧರ್ಮದ ಕುರಿತ ಹೇಳಿಕೆಗೆ INDIA ಮಿತ್ರಪಕ್ಷ ಡಿಎಂಕೆ ವಿರುದ್ಧ ಕಿಡಿ

Srinivas Rao BV

ಲಖನೌ: ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರ ಬಗ್ಗೆ INDIA ಮಿತ್ರ ಪಕ್ಷ ಡಿಎಂಕೆ ವಿರುದ್ಧ  ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಪ್ತ ಐಪಿ ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಸಿಂಗ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು ಡಿಎಂಕೆ ನಾಯಕರು ಸನಾತನ ಧರ್ಮವನ್ನು ತ್ಯಜಿಸಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಡಿಎಂಕೆ ನಾಯಕ ಹಾಗೂ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಅವರೊಂದಿಗೆ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದಾರೆ. ಡಿಎಂಕೆ INDIA ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷವಾಗಿದೆ.

“ಯಾರಾದರೂ ಇಸ್ಲಾಂ ಧರ್ಮವನ್ನು ಅಪಹಾಸ್ಯ ಮಾಡಲು ಮುಂದಾದರೆ, ಮುಸ್ಲಿಂ ಸಮುದಾಯವು ಅದರ ವಿರುದ್ಧ ನಿಲ್ಲುತ್ತದೆ ಮತ್ತು ಅದಕ್ಕಾಗಿ ಜೀವವನ್ನು ತ್ಯಾಗ ಮಾಡಲು ಯಾವಾಗಲೂ ಸಿದ್ಧರಿರುವ ಮೂಲಕ ತನ್ನ ನಂಬಿಕೆಯನ್ನು ರಕ್ಷಿಸುತ್ತದೆ. ಮತ್ತೊಂದೆಡೆ, ಕೆಲವು ವಿಲಕ್ಷಣ ಹಿಂದೂಗಳು ಪ್ರತಿದಿನ ತಮ್ಮ ದೇವರು ಮತ್ತು ದೇವತೆಗಳು, ವೇದಗಳು, ಪುರಾಣಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅಪಹಾಸ್ಯ ಮಾಡುತ್ತಿದ್ದಾರೆ" ಎಂದು ಐಪಿ ಸಿಂಗ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.

SCROLL FOR NEXT