ಲಾಲ್ದುಹೋಮಾ ಪ್ರಮಾಣ ವಚನ ಸ್ವೀಕಾರ 
ದೇಶ

ಮಿಜೋರಾಂ: ಮೊದಲ ಕಾಂಗ್ರೆಸ್, ಎಂಎನ್ ಎಫ್ ಯೇತರ ಸಿಎಂ ಆಗಿ ಲಾಲ್ದುಹೋಮಾ ಪ್ರಮಾಣ ವಚನ ಸ್ವೀಕಾರ

ಝೋರಂ ಪೀಪಲ್ಸ್ ಮೂವ್ ಮೆಂಟ್ ನ (ಝೆಡ್ ಪಿಎಂ) ಅಧ್ಯಕ್ಷ ಲಾಲ್ದುಹೋಮಾ ಅವರು ಮಿಜೋರಾಂನ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇವರು ಈ ಅತ್ಯುನ್ನತ ಹುದ್ದೆಗೇರಿದ ಕಾಂಗ್ರೆಸ್ ಮತ್ತು ಎಂಎನ್ಎಫ್ ಯೇತರ ಮೊದಲ ನಾಯಕರಾಗಿದ್ದಾರೆ. 

ಐಜ್ವಾಲ್: ಝೋರಂ ಪೀಪಲ್ಸ್ ಮೂವ್ ಮೆಂಟ್ ನ (ಝೆಡ್ ಪಿಎಂ) ಅಧ್ಯಕ್ಷ ಲಾಲ್ದುಹೋಮಾ ಅವರು ಮಿಜೋರಾಂನ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇವರು ಈ ಅತ್ಯುನ್ನತ ಹುದ್ದೆಗೇರಿದ ಕಾಂಗ್ರೆಸ್ ಮತ್ತು ಎಂಎನ್ಎಫ್ ಯೇತರ ಮೊದಲ ನಾಯಕರಾಗಿದ್ದಾರೆ.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹರಿಬಾಬು ಕಂಭಂಪತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ 11 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 40 ಸದಸ್ಯ ಬಲದ ಮಿಜೋರಾಂನಲ್ಲಿ ಝೆಡ್ ಪಿಎಂ ಪಕ್ಷ 27 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಬಹುಮತ ಸಾಧಿಸಿದೆ. 

ಮಂಗಳವಾರ ಝೆಡ್ ಪಿಎಂ  ಶಾಸಕಾಂಗ ಪಕ್ಷದ ನಾಯಕರಾಗಿ ಲಾಲ್ದುಹೋಮ ಆಯ್ಕೆಯಾಗಿದ್ದರು. ಅವರು ಮಾಜಿ ಐಪಿಎಸ್ ಅಧಿಕಾರಿಯಾಗಿದ್ದು, ಒಮ್ಮೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
2018 ರಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲ್ಪಟ್ಟಿತ್ತು ಝೆಡ್ ಪಿಎಂ ಪಕ್ಷ , 2019ರ ಚುನಾವಣೆಯಲ್ಲಿ 8 ಸ್ಥಾನಗಳನ್ನು ಗೆದ್ದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel