ಅಖಿಲೇಶ್ ಯಾದವ್ 
ದೇಶ

ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು: ಇವಿಎಂ ಬೇಡ, ಬ್ಯಾಲೆಟ್ ಬೇಕು ಎಂದ ಅಖಿಲೇಶ್ ಯಾದವ್ 

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಶನಿವಾರ ಬ್ಯಾಲೆಟ್ ಪೇಪರ್‌ ಪರವಾಗಿ ಬ್ಯಾಟಿಂಗ್ ಮಾಡಿದ್ದು, ನೇರವಾಗಿ ಇವಿಎಂಗಳನ್ನು ಹೆಸರಿಸದೆ "ಈ ಯಂತ್ರಗಳು" ಮತ್ತು ಈ ಚುನಾವಣಾ ಫಲಿತಾಂಶ ಜನರ ಮನಸ್ಸಿನಲ್ಲಿ...

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಶನಿವಾರ ಬ್ಯಾಲೆಟ್ ಪೇಪರ್‌ ಪರವಾಗಿ ಬ್ಯಾಟಿಂಗ್ ಮಾಡಿದ್ದು, ನೇರವಾಗಿ ಇವಿಎಂಗಳನ್ನು ಹೆಸರಿಸದೆ "ಈ ಯಂತ್ರಗಳು" ಮತ್ತು ಈ ಚುನಾವಣಾ ಫಲಿತಾಂಶ ಜನರ ಮನಸ್ಸಿನಲ್ಲಿ ಅಪನಂಬಿಕೆಯ ಭಾವನೆಯನ್ನು ಸೃಷ್ಟಿಸಿವೆ ಎಂದು ಹೇಳಿದ್ದಾರೆ.

ಅಮೆರಿಕ ಚುನಾವಣೆಯ ಉದಾಹರಣೆಯನ್ನು ನೀಡಿದ ಯಾದವ್, ಭಾರತ, "ಬರ್ಗರ್, ಪಿಜ್ಜಾ ಮತ್ತು ಜೀನ್ಸ್" ಸೇರಿದಂತೆ ಎಲ್ಲಾ ವಿಚಾರದಲ್ಲೂ ಅಮೆರಿಕನ್ನರನ್ನು ಅನುಸರಿಸುತ್ತಿದೆ. ಹಾಗೆ ಅವರ ಬ್ಯಾಲೆಟ್ ಪೇಪರ್‌ ಬಳಕೆಯನ್ನು ಸಹ ಅನುಸರಿಸಬೇಕು ಎಂದು ಹೇಳಿದರು.

ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಇತರ ಹಲವು ನಾಯಕರು, ಡೇಟಾ ದುರ್ಬಳಕೆ ಮತ್ತು ತಿರುಚುವಿಕೆ ಸಾಧ್ಯತೆ ಇರುವುದರಿಂದ ಎಲೆಕ್ಟ್ರಾನಿಕ್ ಯಂತ್ರಗಳನ್ನು ಬಳಸಬಾರದು. ಹಲವು ದೇಶಗಳಲ್ಲಿ ಇವಿಎಂ ಬಳಸುತ್ತಿಲ್ಲ ಎಂದು ಹೇಳಿದ್ದಾರೆ.

ಎಕ್ಸಿಟ್ ಪೋಲ್‌ಗಳು ಪ್ರತಿಪಕ್ಷಗಳ ಗೆಲುವಿನ ಭವಿಷ್ಯ ನುಡಿದಿರುವ ಛತ್ತೀಸ್‌ಗಢದಂತಹ ರಾಜ್ಯಗಳಲ್ಲಿಯೂ ಸಹ ಬಿಜೆಪಿ ಚುನಾವಣೆಯನ್ನು ಗೆದ್ದ ನಂತರ ಇವಿಎಂ ಡೇಟಾದ ದುರ್ಬಳಕೆಯ ಪ್ರಶ್ನೆ ಮತ್ತೆ ಪ್ರಮುವಾಗಿ ಕಾಡುತ್ತಿದೆ. 

ಆಡಳಿತಾರೂಢ ಬಿಜೆಪಿಯನ್ನು ಉಲ್ಲೇಖಿಸಿದ ಅಖಿಲೇಶ್ ಯಾದವ್ ಅವರು, ಆ ಪಕ್ಷ ಅಧಿಕಾರದಲ್ಲಿದೆ ಮತ್ತು ಫಲಿತಾಂಶವನ್ನು ಬದಲಿಸುವ ಶಕ್ತಿ ಸಹ ಇದೆ. ಬೇರೆಯವರು ಏನು ಹೇಳಿದರೂ ಅದನ್ನು ತಿರುಚುತ್ತಾರೆ ಎಂದು ಆರೋಪಿಸಿದರು.

ನಾವು ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುತ್ತೇವೆ ಎಂದು ನಾನು ಹಲವಾರು ಬಾರಿ ಹೇಳಿದ್ದೇನೆ ಮತ್ತು ನಾವು ತಂತ್ರಜ್ಞಾನದೊಂದಿಗೆ ಬೆಳೆದಿದ್ದೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT