ಸಂಗ್ರಹ ಚಿತ್ರ 
ದೇಶ

ಫಾಸ್ಟ್ ಟ್ರ್ಯಾಕ್ ವಿಶೇಷ ಕೋರ್ಟ್‌ಗಳಲ್ಲಿ ಬಾಕಿ ಉಳಿದಿವೆ 2.4 ಲಕ್ಷಕ್ಕೂ ಹೆಚ್ಚು POCSO ಪ್ರಕರಣಗಳು!

ಕೇಂದ್ರ ಸರ್ಕಾರದ ದೃಢವಾದ ನೀತಿ ಮತ್ತು ಹಣಕಾಸು ಬದ್ಧತೆಯ ಹೊರತಾಗಿಯೂ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳಲ್ಲಿ 2023ರ ಜನವರಿ 31ರವರೆಗೆ 2,43,237 ಪೋಕ್ಸೊ ಪ್ರಕರಣಗಳು ಬಾಕಿ ಉಳಿದಿವೆ ಎಂದು ತಿಳಿದುಬಂದಿದೆ.

ನವದೆಹಲಿ: ಕೇಂದ್ರ ಸರ್ಕಾರದ ದೃಢವಾದ ನೀತಿ ಮತ್ತು ಹಣಕಾಸು ಬದ್ಧತೆಯ ಹೊರತಾಗಿಯೂ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳಲ್ಲಿ 2023ರ ಜನವರಿ 31ರವರೆಗೆ 2,43,237 ಪೋಕ್ಸೊ ಪ್ರಕರಣಗಳು ಬಾಕಿ ಉಳಿದಿವೆ ಎಂದು ತಿಳಿದುಬಂದಿದೆ.

ಈ ಸುದೀರ್ಘ ಪಟ್ಟಿಗೆ ಯಾವುದೇ ಹೊಸ ಪ್ರಕರಣವನ್ನು ಸೇರಿಸದಿದ್ದರೂ, ಈ ಬಾಕಿ ಇರುವ ಪ್ರಕರಣಗಳ ತೆರವುಗೊಳಿಸಲು ಕನಿಷ್ಠ ಒಂಬತ್ತು ವರ್ಷಗಳು ಬೇಕಾಗುತ್ತದೆ ಎಂದು ಭಾರತ ಮಕ್ಕಳ ರಕ್ಷಣಾ ನಿಧಿ (ICPF) ಬಹಿರಂಗಪಡಿಸಿದೆ. ಇನ್ನು ಅರುಣಾಚಲ ಪ್ರದೇಶ ಮತ್ತು ಬಿಹಾರದಂತಹ ಕೆಲವು ರಾಜ್ಯಗಳಲ್ಲಿ, ಬಾಕಿ ಉಳಿದಿರುವ ಪ್ರಕರಣಗಳನ್ನು ತೆರವುಗೊಳಿಸಲು 25 ವರ್ಷಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ ಎಂದು ICPF ಹೇಳಿದೆ.

2022ರಲ್ಲಿ ಶಿಕ್ಷೆ ಪ್ರಕಟವಾದ ಪ್ರಕರಣಗಳ ಸಂಖ್ಯೆಯು ಕೇವಲ ಶೇಕಡ 3ರಷ್ಟು ಎಂದು ICPF ಬಿಡುಗಡೆ ಮಾಡಿರುವ 'ಜಸ್ಟೀಸ್ ಅವೇಟ್ಸ್: ಆನ್ ಅನಾಲಿಸಿಸ್ ಆಫ್ ದಿ ಎಫಿಕಸಿ ಆಫ್ ಜಸ್ಟಿಸ್ ಡೆಲಿವರಿ ಮೆಕ್ಯಾನಿಸಂಸ್ ಇನ್ ಕೇಸಸ್ ಆಫ್ ಚೈಲ್ಡ್ ಸೆಕ್ಸುವಲ್ ಅಬ್ಯೂಸ್ ಇನ್ ಇಂಡಿಯಾ ಸಂಶೋಧನಾ ಪ್ರಬಂಧದಲ್ಲಿ ಬಹಿರಂಗಗೊಳಿಸಿದೆ.

ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ 2019ರಲ್ಲಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಮಹತ್ವದ ನಿರ್ಧಾರದ ಹೊರತಾಗಿಯೂ, ಪ್ರತಿ ವರ್ಷ ಕೋಟಿಗಟ್ಟಲೆ ಹಣ ವ್ಯಯಿಸುತ್ತಿದ್ದರೂ ಸಂತ್ರಸ್ತ ಮಕ್ಕಳಿಗೆ ಯಾವುದೇ ನ್ಯಾಯ ಸಿಗುತ್ತಿಲ್ಲ ಎಂದು ಪತ್ರಿಕೆಯ ಸಂಶೋಧನೆಗಳು ದೇಶದ ನ್ಯಾಯಾಂಗ ವ್ಯವಸ್ಥೆಯ ಪರಿಣಾಮಕಾರಿತ್ವದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಎಸೆದಿವೆ.

ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ, 2023ರ ಜನವರಿ ಹೊತ್ತಿಗೆ ಪೋಕ್ಸೊ ಅಡಿಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣೆಯನ್ನು ಪೂರ್ಣಗೊಳಿಸಲು ಅರುಣಾಚಲ ಪ್ರದೇಶವು 30 ವರ್ಷಗಳನ್ನು ತೆಗೆದುಕೊಂಡರೆ, ದೆಹಲಿ 27 ವರ್ಷ, ಪಶ್ಚಿಮ ಬಂಗಾಳ 25, ಮೇಘಾಲಯ 21, ಬಿಹಾರ 26 ಮತ್ತು ಉತ್ತರ ಪ್ರದೇಶ ಬಾಕಿಯನ್ನು ತೆರವುಗೊಳಿಸಲು 22 ವರ್ಷಗಳು ಬೇಕಾಗುತ್ತದೆ.

ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳು (ಎಫ್‌ಟಿಎಸ್‌ಸಿ) ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಸ್ಥಾಪಿಸಲಾಗಿತ್ತು. ವಿಶೇಷವಾಗಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ 2019ರಲ್ಲಿ ಸ್ಥಾಪಿಸಲಾಯಿತು. ಕೇಂದ್ರ ಸರ್ಕಾರವು ಇತ್ತೀಚೆಗೆ ಎಫ್‌ಟಿಎಸ್‌ಸಿಗಳ ಮುಂದುವರಿಕೆಯನ್ನು ಅನುಮೋದಿಸಿದೆ. ಅಲ್ಲದೆ ಇದಕ್ಕಾಗಿ ಬಜೆಟ್ ನಲ್ಲಿ 1900 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.

ಈ ಯೋಜನೆಯು ಅಂತಹ ಪ್ರಕರಣಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲು ಕಾನೂನು ಆದೇಶವನ್ನು ನೀಡಬೇಕಾಗಿತ್ತು. ಇನ್ನೂ ವಿಚಾರಣೆಯಲ್ಲಿದ್ದ ಒಟ್ಟು 2,68,038 ಪ್ರಕರಣಗಳಲ್ಲಿ 8,909 ಪ್ರಕರಣಗಳು ಮಾತ್ರ ಶಿಕ್ಷೆಗೆ ಕಾರಣವಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT