ದೇಶ

ಸಂಸತ್ತು ಭದ್ರತೆ ಉಲ್ಲಂಘನೆ ಪ್ರಕರಣ ಗಂಭೀರ, ಆದರೆ ವಿರೋಧ ಪಕ್ಷಗಳು ರಾಜಕೀಯ ಮಾಡಬಾರದು: ಅಮಿತ್ ಶಾ

Sumana Upadhyaya

ನವದೆಹಲಿ: ಲೋಕಸಭೆಯಲ್ಲಿ ಮೊನ್ನೆ ಬುಧವಾರ ನಡೆದ ಭದ್ರತಾ ಲೋಪವು ಗಂಭೀರ ಪ್ರಕರಣವಾಗಿದೆ ಎಂದು ಒಪ್ಪಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಘಟನೆಯ ತನಿಖೆಗಾಗಿ ರಚಿಸಲಾದ ಸಮಿತಿಯು ತನ್ನ ವರದಿಯನ್ನು 15-20 ದಿನಗಳಲ್ಲಿ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಆದರೆ, ಪ್ರತಿಪಕ್ಷಗಳು ಈ ಘಟನೆಯನ್ನು ರಾಜಕೀಯಗೊಳಿಸಬಾರದು. ಭದ್ರತಾ ಲೋಪ ಗಂಭೀರ ವಿಷಯ. ಲೋಕಸಭೆ ಸ್ಪೀಕರ್ ಇದನ್ನು ಮನಗಂಡಿದ್ದಾರೆ. ಪ್ರತಿಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ. ನಾನು ಉಲ್ಲಂಘನೆಯನ್ನು ನಿರಾಕರಿಸುವುದಿಲ್ಲ, ಇದು ಉಲ್ಲಂಘನೆಯಾಗಿದ್ದು, ಖಂಡಿತಾ ಗಂಭೀರ ಪ್ರಕರಣ, ಆದರೆ ಅದನ್ನು ರಾಜಕೀಯಗೊಳಿಸಬಾರದು ಎಂದು ಕೇಳಿಕೊಂಡರು. 

ಲೋಕಸಭೆಯ ಭದ್ರತೆ ಸ್ಪೀಕರ್ ಅವರ ಅಧೀನದಲ್ಲಿದೆ ಎಂಬುದು ಎಲ್ಲರಿಗೂ ಗೊತ್ತು. ಅವರು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದು, ನಾವು ದೇಶದ ಹಿರಿಯ ಡಿಜಿಪಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದೇವೆ. ಇತರ ಏಜೆನ್ಸಿಗಳ ಪ್ರತಿನಿಧಿಗಳು ಸಹ ಸಮಿತಿಯ ಭಾಗವಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸ್ಪೀಕರ್‌ಗೆ ವರದಿ ಬರಲಿದೆ. ಸ್ಪೀಕರ್ ವರದಿಯನ್ನು ಬಿಡುಗಡೆ ಮಾಡಿದರೆ ಅದು ಸೂಕ್ತ ಎಂದು ನಾನು ಭಾವಿಸುತ್ತೇನೆ ಎಂದು ಅಮಿತ್ ಶಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.

SCROLL FOR NEXT