ದೇಶ

ಅಕ್ರಮ ಹಣ ವರ್ಗಾವಣೆ: ಇಡಿಯಿಂದ ಮಧುರೈ ಸಂಸ್ಥೆಯ ರೂ. 207 ಕೋಟಿ ಮೌಲ್ಯದ ಆಸ್ತಿ ಜಪ್ತಿ

Nagaraja AB

ಮಧುರೈ: ಮಧುರೈ ಮೂಲದ ಸಂಸ್ಥೆಯೊಂದು ನಡೆಸಿದ ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ತಮಿಳುನಾಡಿನಲ್ಲಿರುವ ಅದರ 207 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಭಾನುವಾರ ತಿಳಿಸಿದೆ. ಈ ಸಂಬಂಧ ತಮಿಳುನಾಡು ಪೊಲೀಸರ ಆರ್ಥಿಕ ಅಪರಾಧ ವಿಭಾಗ ದಾಖಲಿಸಿದ ಎಫ್‌ಐಆರ್‌ನಿಂದ ಇಡಿ ತನಿಖೆ ನಡೆಸುತ್ತಿದೆ. 

ನಿಯೋಮ್ಯಾಕ್ಸ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಮೂಹ ಕಂಪನಿಗಳ ವಿರುದ್ಧ ಹೂಡಿಕೆದಾರರು ದೂರು ದಾಖಲಿಸಿದ ನಂತರ ಪೊಲೀಸ್ ಎಫ್‌ಐಆರ್ ದಾಖಲಿಸಲಾಗಿದೆ. ಹೆಚ್ಚಿನ ಆದಾಯದ ಭರವಸೆಯೊಂದಿಗೆ ಶೇ.12 ರಿಂದ 13ರಷ್ಟು ಬಡ್ಡಿಯೊಂದಿಗೆ ವಿವಿಧ ಯೋಜನೆಗಳಲ್ಲಿ (ಪ್ಲಾಟ್ ಅಭಿವೃದ್ಧಿ) ಜನರಿಂದ ಲಕ್ಷಾಂತರ ಹಣ ಪೀಕಿಸಿ ನಂತರ ವಂಚಿಸಿದ್ದಾರೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ. 

ಕಂಪನಿ ಮತ್ತು ಅದರ ಪ್ರವರ್ತಕರು ನೀಡಿದ್ದ ಭರವಸೆವನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಸಾರ್ವಜನಿಕರಿಂದ ನೂರಾರು ಕೋಟಿಗಳಷ್ಟು ಹಣವನ್ನು ಸಂಗ್ರಹಿಸಿರುವ ಕಂಪನಿ, ನಂತರ ಆ  ಆ ಹಣವನ್ನು ತನ್ನ ಇತರ  ಕಂಪನಿಗಳು ಮತ್ತು ಇತರ ಘಟಕಗಳಿಗೆ ವರ್ಗಾಯಿಸುವ ಮೂಲಕ ಮೋಸ ಮಾಡಿದೆ ಎಂದು ಇಡಿ ಹೇಳಿದೆ.

ಅಪರಾಧದ ಮರೆಮಾಚಲು ಗುಂಪು ತನ್ನ ಖಾತೆಗಳ ಪುಸ್ತಕಗಳಲ್ಲಿ ತಿರುಚಲಾಗಿದೆ ಮತ್ತು ಕಂಪನಿಯ ಆಡಿಟರ್ ಹೇಳಿಕೆಯಲ್ಲಿ ಇದನ್ನು ಒಪ್ಪಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.

SCROLL FOR NEXT