ಚಿತ್ರವನ್ನು ಪ್ರಾತಿನಿಧಿಕ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ. 
ದೇಶ

ಭಾರತದಲ್ಲಿನ ತಮ್ಮ ಆಸ್ತಿಗಳ ರಕ್ಷಣೆಗೆ ವಿಶೇಷ ಇಲಾಖೆ ಸ್ಥಾಪಿಸಲು ಎನ್‌ಆರ್‌ಐಗಳ ಒತ್ತಾಯ!

ಭಾರತದಲ್ಲಿ ತಮ್ಮ ಆಸ್ತಿಗಳು ಮತ್ತು ಸ್ವತ್ತುಗಳು ಸುರಕ್ಷಿತವಾಗಿರಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತದಲ್ಲಿನ ಅಧಿಕಾರಿಗಳನ್ನು ಒತ್ತಾಯಿಸಲು ಮನವಿ ಪತ್ರವನ್ನು ಸಲ್ಲಿಸಲು ಎನ್‌ಆರ್‌ಐಗಳು ಈ ತಿಂಗಳ ಕೊನೆಯಲ್ಲಿ ತಮ್ಮ ರಾಯಭಾರ ಕಚೇರಿಗಳು ಮತ್ತು ಕಾನ್ಸುಲರ್ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ.

ಬೆಂಗಳೂರು: ಭಾರತದಲ್ಲಿ ತಮ್ಮ ಆಸ್ತಿಗಳು ಮತ್ತು ಸ್ವತ್ತುಗಳು ಸುರಕ್ಷಿತವಾಗಿರಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತದಲ್ಲಿನ ಅಧಿಕಾರಿಗಳನ್ನು ಒತ್ತಾಯಿಸಲು ಮನವಿ ಪತ್ರವನ್ನು ಸಲ್ಲಿಸಲು ಎನ್‌ಆರ್‌ಐಗಳು ಈ ತಿಂಗಳ ಕೊನೆಯಲ್ಲಿ ತಮ್ಮ ರಾಯಭಾರ ಕಚೇರಿಗಳು ಮತ್ತು ಕಾನ್ಸುಲರ್ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ.

ಎನ್‌ಆರ್‌ಐಗಳು ಶೋಷಣೆಗೆ ಒಳಗಾಗದಂತೆ 383 ಸದಸ್ಯರೊಂದಿಗೆ ಪ್ರಾರಂಭಿಸಲಾದ ಎನ್‌ಆರ್‌ಐ ಕುಂದುಕೊರತೆಗಳ ಗುಂಪಿನ ಟೆಕ್ಕಿ ಸುಭಾಸ್ ಬಾಳಪ್ಪನವರ್ ಮಾತನಾಡಿ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲರ್ ಕಚೇರಿಗೆ ಬೈಸಿಕಲ್‌ನಲ್ಲಿ ಅರ್ಜಿದಾರರ ಗುಂಪಿನೊಂದಿಗೆ ಹೋಗುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.  ಯುಎಸ್‌ನಲ್ಲಿರುವ ಎಲ್ಲಾ ಆರು ದೂತಾವಾಸ ಕಚೇರಿಗಳಿಗೆ ಬ್ಯಾಚ್‌ಗಳಲ್ಲಿ ಅರ್ಜಿದಾರರ ಭೇಟಿ ನೀಡಿ ಇದೇ ರೀತಿಯ ಅರ್ಜಿಗಳನ್ನು ನೀಡುತ್ತಾರೆ ಎಂದು ಅವರು ಹೇಳಿದರು.

ಲ್ಯಾಂಬೆತ್‌ನ ಮಾಜಿ ಮೇಯರ್ ಡಾ ನೀರಜ್ ಪಾಟೀಲ್ ಲಂಡನ್ ಕಚೇರಿಗೆ ಅರ್ಜಿದಾರರ ತಂಡವನ್ನು ಕರೆದೊಯ್ಯುವ ನಿರೀಕ್ಷೆಯಿದೆ, ಆದರೆ ಎನ್‌ಆರ್‌ಐ ಅರ್ಜಿದಾರರ ತಂಡ ಕೆನಡಾದಲ್ಲಿ ಎರಡು ಕಾನ್ಸುಲರ್ ಕಚೇರಿಗಳಿಗೆ ಹೋಗುತ್ತವೆ, ಯುನೈಟೆಡ್ ಕಿಂಗ್‌ಡಂನಲ್ಲಿ ಒಂದು, ಮಧ್ಯಪ್ರಾಚ್ಯದಲ್ಲಿ ಎರಡು, ಆಸ್ಟ್ರೇಲಿಯಾದಲ್ಲಿ ಒಂದು, ಮತ್ತು ಯುರೋಪಿನಲ್ಲಿವೆ.  ಗಲ್ಫ್ ಪ್ರದೇಶದಲ್ಲಿ ಶಶಿಧರ ನಾಗರಾಜಪ್ಪ ಮುನ್ನಡೆಸಿದರೆ, ಕೆನಡಾದ ವ್ಯಾಂಕೋವರ್‌ನಲ್ಲಿ ರಾಜಾ ನಾಯ್ಕ್, ಆಸ್ಟ್ರೇಲಿಯಾದಲ್ಲಿ ಜಯಪ್ರಕಾಶ್ ತಂಡವನ್ನು ಮುನ್ನಡೆಸಲಿದ್ದಾರೆ.

ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಎನ್‌ಆರ್‌ಐಗಳ ಆಸ್ತಿ, ಸಂಪತ್ತು ಮತ್ತು ಆಸ್ತಿಯನ್ನು ರಕ್ಷಿಸುವ ವಿಷಯ ತೆಗೆದುಕೊಳ್ಳಬೇಕೆಂದು ಅವರು ಬಯಸುತ್ತಾರೆ, ಏಕೆಂದರೆ ಚುನಾವಣೆಗಳು  ಸಮೀಪಿಸುತ್ತಿದ್ದು, ಅನಿವಾಸಿ ಭಾರತೀಯರ ಕದ ತಟ್ಟಲು ಸಿದ್ಧರಾಗಿದ್ದಾರೆ, ಹೀಗಾಗಿ ಅಗತ್ಯವಿದ್ದರೆ ನ್ಯಾಯಾಂಗದ ಮೆಟ್ಟೇಲಿರಲು ಸಿದ್ಧವಿರುವುದಾಗಿ ತಿಳಿಸಿದರು.

ವಿಶೇಷವಾಗಿ ನೂರಾರು ಎನ್‌ಆರ್‌ಐಗಳು ವಂಚನೆಗೆ ಬಲಿಯಾಗಿದ್ದಾರೆ, ಹೀಗಾಗಿ ನಿಯಮಗಳು ಮತ್ತು ವ್ಯವಸ್ಥೆಗಳನ್ನು ರಚಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸುತ್ತಾರೆ. ಅನಿವಾಸಿ ಭಾರತೀಯರು ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಸುಮಾರು ಶೇ, 30 ರಷ್ಟು ಹೊಂದಿದ್ದಾರೆ. ಆಸ್ತಿ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಂಡಿರುವವರು ದೂರದ ಕಾರಣದಿಂದ ಭಾರತದಲ್ಲಿ ತಮ್ಮ ಆಸ್ತಿಗಳನ್ನು ಸಂರಕ್ಷಿಸುವಾಗ ತಾವು ಗಂಭೀರ ಅನಾನುಕೂಲ ಹೊಂದಿದ್ದೇವೆ ಎಂದು ಅರಿತುಕೊಂಡಿದ್ದಾರೆ.

ಹೀಗಾಗಿ ಎನ್‌ಆರ್‌ಐಗಳಿಗೆ ವಿಶೇಷ ಇಲಾಖೆಯನ್ನು ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ. ಸಂಪತ್ತಿನ ಕಾಳಜಿಯನ್ನು ಪರಿಣಾಮಕಾರಿಯಾಗಿ ನೋಡಿಕೊಳ್ಳಲಾಗುತ್ತದೆ. ಅವರು ಎನ್‌ಆರ್‌ಐಗಳಿಗೆ ಆನ್‌ಲೈನ್ ಎಫ್‌ಐಆರ್, ಆನ್‌ಲೈನ್ ವಿಚಾರಣೆ, ಪಂಚನಾಮಗಳಂತಹ ಬಳಕೆದಾರ ಸ್ನೇಹಿ ಕ್ರಮಗಳನ್ನು ಕೋರಿದ್ದಾರೆ. ತನಿಖೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿದರೆ ಮತ್ತು ವಿಶೇಷವಾಗಿ ಸ್ಥಾಪಿಸಲಾದ ನ್ಯಾಯಾಲಯದಲ್ಲಿ ಸಮಸ್ಯೆಗಳನ್ನು, ವರ್ಷಗಳು ಮತ್ತು ದಶಕಗಳವರೆಗೆ ಎಳೆಯುವ ಬದಲು ಸಮಯಕ್ಕೆ ಸೀಮಿತವಾದ ರೀತಿಯಲ್ಲಿ ಬಗೆ ಹರಿದರೆ ಅದು ತುಂಬಾ ಅನುಕೂಲಕರವಾಗಿರುತ್ತದೆ ಎಂದು ಹೇಳಿದರು.

ಎನ್‌ಆರ್‌ಐಗಳನ್ನು ವಂಚಿಸಲು ಅಥವಾ ಹಾನಿ ಮಾಡಲು ಬಯಸುವವರಿಗೆ ಕಠಿಣ ಶಿಕ್ಷೆಯನ್ನು ಬಯಸುತ್ತೇವೆ,  ಎನ್‌ಆರ್‌ಐಗಳಿಗೆ ಅನಗತ್ಯವಾಗಿ ದಂಡ ವಿಧಿಸುವುದಿಲ್ಲ ಎಂದು ಕ್ಯಾಬಿನೆಟ್ ಸಚಿವ ಸ್ಥಾನವನ್ನು ಹೊಂದಿರುವ ಕರ್ನಾಟಕ ಎನ್‌ಆರ್‌ಐ ಫೋರಂನ ಅಧ್ಯಕ್ಷೆ ಆರತಿ ಕೃಷ್ಣ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಅನಿವಾಸಿ ಭಾರತೀಯರನ್ನು ರಕ್ಷಿಸುವ ಅಗತ್ಯವಿದೆ. ನಾವು ನಮ್ಮ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಇಲಾಖೆ ಎಂದು ಹೇಳಿದ್ದೆವು ಹೀಗಾಗಿ ಕರ್ನಾಟಕದಲ್ಲಿ ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಅನಿವಾಸಿ ಭಾರತೀಯರಿಗಾಗಿ ಹೊಸ ಇಲಾಖೆ ಮತ್ತು ಸಚಿವಾಲಯವನ್ನು ಸ್ಥಾಪಿಸಲು ಲಭ್ಯವಿರುವ ವಿಭಿನ್ನ ಮಾದರಿಗಳ ಮೂಲಕ ಹೋಗುತ್ತಿದ್ದೇವೆ ಎಂದಿದ್ದಾರೆ. ಮಾಜಿ ಸಂಸದ ಜನಾರ್ದನ ಸ್ವಾಮಿ ಮಾತನಾಡಿ, ಇದೊಂದು ಮಹತ್ವದ ವಿಚಾರವಾಗಿದ್ದು, ಸೂಕ್ತ ಇಲಾಖೆಗಳು ಒಗ್ಗೂಡಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT