ದೆಹಲಿ ಮೆಟ್ರೋದಲ್ಲಿ ಜಗಳ 
ದೇಶ

ಮೆಟ್ರೋದಲ್ಲಿ ಅಶ್ಲೀಲ ಕೃತ್ಯ, ಕಿಸ್ಸಿಂಗ್ ಆಯ್ತು, ಇದೀಗ ಇಬ್ಬರು ಯುವಕರಿಂದ ಅಪಾಯಕಾರಿ ಬಾಕ್ಸಿಂಗ್, ವಿಡಿಯೋ ವೈರಲ್!

ದೆಹಲಿ ಮೆಟ್ರೋದಲ್ಲಿ ಅಪಾಯಕಾರಿ ಬಾಕ್ಸಿಂಗ್ ನಡೆದಿದೆ. ರೈಲಿನಲ್ಲಿ ಪ್ರಯಾಣಿಕರು ಭಯಭೀತರಾಗುವ ರೀತಿಯಲ್ಲಿ ಇಬ್ಬರು ಹೊಡೆದಾಡಿಕೊಂಡಿದ್ದು ಈ ವಿಡಿಯೋ ವೈರಲ್ ಆಗಿದೆ.

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಅಪಾಯಕಾರಿ ಬಾಕ್ಸಿಂಗ್ ನಡೆದಿದೆ. ರೈಲಿನಲ್ಲಿ ಪ್ರಯಾಣಿಕರು ಭಯಭೀತರಾಗುವ ರೀತಿಯಲ್ಲಿ ಇಬ್ಬರು ಹೊಡೆದಾಡಿಕೊಂಡಿದ್ದು ಈ ವಿಡಿಯೋ ವೈರಲ್ ಆಗಿದೆ.

ದೆಹಲಿ ಮೆಟ್ರೋ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ವೈರಲ್ ಮಾಡಲು ಜನರಿಗೆ ನೆಚ್ಚಿನ ಸ್ಥಳವಾಗಿದೆ. ದೆಹಲಿ ಮೆಟ್ರೋದ ವಿಡಿಯೋಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೀಗ ಹೊಸ ವೀಡಿಯೋವೊಂದು ವೈರಲ್ ಆಗಿದ್ದು, ಪ್ರಯಾಣಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ.

ದೆಹಲಿ ಮೆಟ್ರೋದಲ್ಲಿ ಜಗಳಗಳ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿದ್ದರೂ, ಈ ಘಟನೆಯು ವಿಶೇಷವಾದದ್ದು. ಇದರಲ್ಲಿ ಇಬ್ಬರು ಪ್ರಯಾಣಿಕರು ನುರಿತ ಬಾಕ್ಸರ್ ಗಳಂತೆ ಪರಸ್ಪರ ಗುದ್ದಾಡುತ್ತಿದ್ದಾರೆ. ಇವರಿಬ್ಬರೂ ಎಲ್ಲೋ ಬಾಕ್ಸಿಂಗ್ ತರಬೇತಿ ಪಡೆದಿದ್ದಾರಂತೆ.

ರೈಲು ಮುಂದೆ ಸಾಗುತ್ತಿದ್ದಂತೆ ಬಡಿದಾಟ ನಡೆಸಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ರೈಲಿನಲ್ಲಿರುವ ಇಬ್ಬರು ಯುವಕರು ವೇಗವಾಗಿ ಪರಸ್ಪರ ಗುದ್ದಾಡಲು ಪ್ರಾರಂಭಿಸುತ್ತಾರೆ. ಈ ಅವ್ಯವಸ್ಥೆಯ ಪರಿಸ್ಥಿತಿಯನ್ನು ಇತರ ಪ್ರಯಾಣಿಕರು ಆಘಾತದಿಂದ ನೋಡುತ್ತಿದ್ದಾರೆ. ಕೆಲವರು ಧೈರ್ಯ ಮಾಡಿ ಇದನ್ನು ತಡೆಯಲು ಮುಂದಾಗುತ್ತಾರೆ. ಆದರೆ ಇವರ ಕೋಪವನ್ನು ನೋಡಿ, ಅವರು ಸುಮ್ಮನಾಗುತ್ತಾರೆ ವೀಡಿಯೊ ಮುಗಿಯುವವರೆಗೂ ಯಾರೂ ಮಧ್ಯಪ್ರವೇಶಿಸುವುದಿಲ್ಲ.

ದೆಹಲಿ ಮೆಟ್ರೋದಲ್ಲಿ ನಡೆದ ಹೊಡೆದಾಟ ಇದೇ ಮೊದಲಲ್ಲ. ದೆಹಲಿ ಮೆಟ್ರೋ ವಾಗ್ವಾದಗಳಿಂದ ಹಿಡಿದು ಜಗಳಗಳವರೆಗೆ ಅನೇಕ ಘಟನೆಗಳನ್ನು ಕಂಡಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಮೆಟ್ರೋ ಸುರಕ್ಷತೆಯ ಬಗ್ಗೆ ಜನ ನಾನಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ, ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ: 27 ಕೋಟಿ ರೂ. ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!