ದೇಶ

ಸಂಸತ್ ಭದ್ರತಾ ಲೋಪ: 'ಮಾಸ್ಟರ್ ಮೈಂಡ್' ಲಲಿತ್ ಝಾ ಪೊಲೀಸ್ ಕಸ್ಟಡಿ ಅವಧಿ ಜ. 5 ರವರೆಗೆ ವಿಸ್ತರಣೆ

Lingaraj Badiger

ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣದ 'ಮಾಸ್ಟರ್ ಮೈಂಡ್' ಲಿಲತ್ ಝಾ ಪೊಲೀಸ್ ಕಸ್ಟಡಿ ಅವಧಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಜನವರಿ 5 ರವರೆಗೆ ವಿಸ್ತರಿಸಿದೆ.

ದೆಹಲಿ ಪೊಲೀಸರು ಸಲ್ಲಿಸಿದ ಮನವಿಯ ಮೇರೆಗೆ ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಲಲಿತ್ ಝಾ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಿದರು.

ಆರೋಪಿ ಲಲಿತ್ ಝಾ ಇಡೀ ಘಟನೆಯ ಮಾಸ್ಟರ್ ಮೈಂಡ್ ಆಗಿದ್ದು, ಸಂಪೂರ್ಣ ಪಿತೂರಿಯನ್ನು ಬಯಲಿಗೆಳೆಯಲು ಹೆಚ್ಚಿನ ವಿಚಾರಣೆಯ ಅಗತ್ಯ ಇದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

ನ್ಯಾಯಾಲಯವು ಗುರುವಾರ ಇತರ ನಾಲ್ವರು ಆರೋಪಿಗಳಾದ ಮನೋರಂಜನ್ ಡಿ, ಸಾಗರ್ ಶರ್ಮಾ, ಅಮೋಲ್ ಧನರಾಜ್ ಶಿಂಧೆ ಮತ್ತು ನೀಲಂ ದೇವಿ ಅವರ ಕಸ್ಟಡಿಯನ್ನು ಜನವರಿ 5 ರವರೆಗೆ ವಿಸ್ತರಿಸಿದೆ.

SCROLL FOR NEXT