ದೇಶ

ಸದನದಲ್ಲಿ ಪ್ರತಿಭಟನೆ: ಅಂತಾರಾಷ್ಟ್ರೀಯ ಗೀತಾ ಮಹೋತ್ಸವದಲ್ಲಿ ಪ್ರತಿಪಕ್ಷಗಳ ವಿರುದ್ಧ ಅಮಿತ್ ಶಾ ವಾಗ್ದಾಳಿ 

Nagaraja AB

ಚಂಡೀಗಢ: ಸಂಸತ್ತು ಮೂರು ಹೊಸ ಕ್ರಿಮಿನಲ್ ನ್ಯಾಯ ಕಾನೂನುಗಳಿಗೆ ಅನುಮೋದನೆ ನೀಡಿದ ಬೆನ್ನಲ್ಲೇ, ಡಿಸೆಂಬರ್ 2024 ರ ವೇಳೆಗೆ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಹೊಸ ಕಾನೂನುಗಳನ್ನು ಜಾರಿಗೆ ತರಲು ಸಿದ್ಧವಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮುಂದಿನ ವರ್ಷದ ಡಿಸೆಂಬರ್ ವೇಳೆಗೆ, ಕೇಂದ್ರಾಡಳಿತ ಪ್ರದೇಶಗಳು ಅಗತ್ಯವಿರುವ ಮೂಲಸೌಕರ್ಯ, ಸಾಫ್ಟ್‌ವೇರ್, ತರಬೇತಿ ಪಡೆದ ಮಾನವ ಸಂಪನ್ಮೂಲಗಳು ಮತ್ತು ಸಂಪೂರ್ಣವಾಗಿ ಗಣಕೀಕೃತ ನ್ಯಾಯಾಲಯಗಳನ್ನು ಹೊಂದಲಿದ್ದು, ಹೊಸದಾಗಿ ಅಂಗೀಕರಿಸಲ್ಪಟ್ಟ ಮೂರು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಕಾನೂನುಗಳನ್ನು ಸುಲಭವಾಗಿ ಅನುಷ್ಠಾನಗೊಳಿಸುತ್ತವೆ ಎಂದು ಶಾ ಹೇಳಿದ್ದಾರೆ. 

ಲೋಕಸಭೆಯು ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಮಸೂದೆಯನ್ನು ಬುಧವಾರ ಅಂಗೀಕರಿಸಿತು. ರಾಜ್ಯಸಭೆ ಗುರುವಾರ ಅವುಗಳಿಗೆ ಅನುಮೋದನೆ ನೀಡಿತ್ತು. ಮೂರು ಮಸೂದೆಗಳು ಕ್ರಮವಾಗಿ 1860 ರ ಭಾರತೀಯ ದಂಡ ಸಂಹಿತೆ, 1973 ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872 ರ ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಬದಲಿಸುತ್ತವೆ.

ಕುರುಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಗೀತಾ ಮಹೋತ್ಸವದಲ್ಲಿ ಮಾತನಾಡಿದ ಅಮಿತ್ ಶಾ, ವೈಯಕ್ತಿಕ, ಸಾಮಾಜಿಕ, ರಾಷ್ಟ್ರೀಯ ಮತ್ತು ಜಾಗತಿಕ ಸವಾಲುಗಳಿಗೆ ಪರಿಹಾರವಾಗಿ ಭಗವದ್ಗೀತೆಯಲ್ಲಿ ಹುದುಗಿರುವ ಸಮಯಾತೀತ ಬುದ್ಧಿವಂತಿಕೆಯನ್ನು ಒತ್ತಿ ಹೇಳಿದರು. ಮೂರು ಕಾನೂನುಗಳ ಮೇಲಿನ ಸಂಸತ್ತಿನ ಚರ್ಚೆಯನ್ನು ಬಹಿಷ್ಕರಿಸಿದ್ದಕ್ಕಾಗಿ ಮತ್ತು ಉಪರಾಷ್ಟ್ರಪತಿಯನ್ನು ಅನುಕರಿಸಿದ್ದಕ್ಕಾಗಿ ಶಾ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.  

“ಪ್ರತಿಪಕ್ಷಗಳು ಮಸೂದೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕೆಂದು ನಾನು ಬಯಸುತ್ತೇನೆ. ದುರಾದೃಷ್ಟವಶಾತ್, ಅವರು ಮಸೂದೆಗಳ ಮೇಲಿನ ಚರ್ಚೆಯನ್ನು ಬಹಿಷ್ಕರಿಸಲು ನಿರ್ಧರಿಸಿದರು. ಸಂಸತ್ತಿನಲ್ಲಿ ಮಹತ್ವದ ಚರ್ಚೆ ನಡೆಯುತ್ತಿದ್ದಾಗ ವಿರೋಧ ಪಕ್ಷದ ಸದಸ್ಯರು ಉಪರಾಷ್ಟ್ರಪತಿಯನ್ನು ಅಣಕಿಸುತ್ತಿದ್ದರು. ಇದಕ್ಕಿಂತ ಖಂಡನೀಯವಾದದ್ದು ಯಾವುದೂ ಸಾಧ್ಯವಿಲ್ಲ ಎಂದು ಶಾ ಹೇಳಿದರು.

ಮಂಗಳವಾರ ಸಂಸತ್ ಭವನದ ಮೆಟ್ಟಿಲುಗಳ ಮೇಲೆ ಪ್ರತಿಪಕ್ಷಗಳ ಪ್ರತಿಭಟನೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಣಕಿಸಿದ್ದನ್ನು ಶಾ ಉಲ್ಲೇಖಿಸಿದರು.

SCROLL FOR NEXT