ದೇಶ

ರಾಜನಾಥ್ ಸಿಂಗ್ ಸತ್ತವರನ್ನು ಮರಳಿ ತರಬಹುದೇ?: ಫಾರೂಕ್ ಅಬ್ದುಲ್ಲಾ

Lingaraj Badiger

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜಮ್ಮು ಮತ್ತು ಕಾಶ್ಮೀರ ಭೇಟಿಯ ಬಗ್ಗೆ ತಮಗೆ ಯಾವುದೇ ನಿರೀಕ್ಷೆಗಳಿಲ್ಲ ಎಂದಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು,  ಸತ್ತವರನ್ನು ವಾಪಸ್ ಕರೆತರುಬಹುದೇ? ಎಂದು ಬುಧವಾರ ಪ್ರಶ್ನಿಸಿದ್ದಾರೆ.

ಶ್ರೀನಗರದಿಂದ 80 ಕಿಲೋಮೀಟರ್ ದೂರದಲ್ಲಿರುವ ಕುಲ್ಗಾಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ, "ಅವರ ಭೇಟಿಯ ಬಗ್ಗೆ ನನಗೆ ಯಾವುದೇ ನಿರೀಕ್ಷೆಗಳಿಲ್ಲ. ಅವರು ಸತ್ತವರನ್ನು ಮರಳಿ ತರಬಹುದೇ? ಅವರಿಗೆ ಆ ಶಕ್ತಿ ಇದೆಯೇ? ಆದರೆ ಅಂತಹ ಅನ್ಯಾಯ ಮರುಕಳಿಸದಂತೆ ಅವರು ನೋಡಿಕೊಳ್ಳಬೇಕು ಎಂದಿದ್ದಾರೆ.

ನಮ್ಮ ಜನ ಹತ್ಯೆಯಾಗಿದ್ದರಿಂದ ರಾಜನಾಥ್ ಸಿಂಗ್ ಭೇಟಿ ನೀಡುತ್ತಿದ್ದಾರೆ ಮತ್ತು ಸಂತ್ರಸ್ತ ಕುಟುಂಬಗಳ ಗಾಯಗಳಿಗೆ ಸಚಿವರು ಮುಲಾಮು ಹಚ್ಚುತ್ತಾರೆ ಎಂದು ಅಬ್ದುಲ್ಲಾ ಹೇಳಿದ್ದಾರೆ.

ಕಳೆದ ಗುರುವಾರ ಪೂಂಚ್‌ನಲ್ಲಿ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ನಾಲ್ವರು ಸೈನಿಕರು ಹುತಾತ್ಮರಾಗಿದ್ದು, ಮೂವರು ನಾಗರಿಕರು ಸಹ ಮೃತಪಟ್ಟಿದ್ದರು.

ಸೇನಾ ವಾಹನಗಳ ಮೇಲಿನ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ರಕ್ಷಣಾ ಸಚಿವರು ಇಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಲು ರಾಜೌರಿಗೆ ತೆರಳಿದ್ದಾರೆ.

SCROLL FOR NEXT