ರೈಲ್ವೆ ನಿಲ್ದಾಣಗಳಲ್ಲಿ ಮೋದಿ ಜೊತೆ ಸೆಲ್ಫಿ ಸ್ಥಳ 
ದೇಶ

ರೈಲ್ವೆ ನಿಲ್ದಾಣಗಳಲ್ಲಿ ಮೋದಿ ಜೊತೆ ಸೆಲ್ಫಿ ಸ್ಪಾಟ್: ಸ್ವ-ಪ್ರಚಾರದ ಗೀಳಿಗೆ ಮಿತಿಯೇ ಇಲ್ವಾ?- ಖರ್ಗೆ

ದಿನದಿಂದ ಹೆಚ್ಚುತ್ತಿರುವ ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಸೆಲ್ಫಿ ಬೂತ್ ಗಳನ್ನು ಸ್ಥಾಪಿಸಲಾಗುತ್ತಿದೆ.

ನವದೆಹಲಿ: ಹೆಚ್ಚುತ್ತಿರುವ ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಸೆಲ್ಫಿ ಬೂತ್ ಗಳನ್ನು ಸ್ಥಾಪಿಸಲಾಗುತ್ತಿದೆ.

ದೇಶಾದ್ಯಂತ ಈ 3ಡಿ ಸೆಲ್ಫಿ ಬೂತ್ ಗಳು ಪ್ರಯಾಣಿಕರಿಗೆ ಪ್ರಧಾನಿ ಮೋದಿ ಕಟೌಟ್ ಜೊತೆ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಅನುವುಮಾಡಿಕೊಡಲಿವೆ. 

ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಚುನಾವಣೆಗೆ ಅಗ್ಗದ ಪ್ರಚಾರ ಎಂದು ಹೇಳಿದ್ದಾರೆ. 

ಈ ಹಿಂದೆ ಮೋದಿ ಅವರ ಕಟೌಟ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ 822 ಸ್ಥಳಗಳನ್ನು ಸ್ಥಾಪಿಸುವುದಕ್ಕೆ ಸೇನಾ ಪಡೆಗಳಿಗೆ ಸೂಚನೆ ನೀಡುವ ಮೂಲಕ ನಮ್ಮ ಯೋಧರ ತ್ಯಾಗ, ಬಲಿದಾನಗಳನ್ನು ಬಳಸಿಕೊಳ್ಳಲಾಗಿತ್ತು. ಈಗ ರಾಜ್ಯಗಳಿಗೆ ಬರ ಹಾಗೂ ನೆರೆ ಪರಿಹಾರ ನೀಡದೇ, ವಿಪಕ್ಷಗಳಿರುವ ರಾಜ್ಯಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ ನಿಧಿಗಳನ್ನು ಬಿಡುಗಡೆ ಮಾಡದೇ ಈ ಅಗ್ಗದ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಸೆಲ್ಫಿ ಬೂತ್ ಗಳ ಬಗ್ಗೆ ಆರ್ ಟಿಐ ಮಾಹಿತಿಯನ್ನು ಉಲ್ಲೇಖಿಸಿರುವ ಖರ್ಗೆ, ಎ ಶ್ರೇಣಿಯ ರೈಲು ನಿಲ್ದಾಣಗಳಲ್ಲಿ  ತಾತ್ಕಾಲಿಕ ಸೆಲ್ಫಿ ಭೂತ್ ಒಂದರ ಸ್ಥಾಪನೆಗೆ 1.25 ಲಕ್ಷ ರೂಪಾಯಿ ಖರ್ಚಾಗಲಿದ್ದರೆ, ಸಿ ಶ್ರೇಣಿಯ ನಿಲ್ದಾಣಗಳಲ್ಲಿ ಶಾಶ್ವತ ಸೆಲ್ಫಿ ಬೂತ್ ಗಳಿಗೆ 6.25 ಲಕ್ಷ ರೂಪಾಯಿ ಖರ್ಚಾಗಲಿದೆ ಎಂದು ಹೇಳಿದ್ದಾರೆ. 

ದೆಹಲಿಯ ರೈಲ್ವೆ ಮಂಡಳಿಯು 19 ವಲಯ ರೈಲ್ವೇಗಳ ಜನರಲ್ ಮ್ಯಾನೇಜರ್‌ಗಳಿಗೆ ನಿಲ್ದಾಣಗಳಲ್ಲಿ ಸೆಲ್ಫಿ ಬೂತ್‌ಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ ಎಂದು ವರದಿಗಳಿವೆ.

ಫೈಬರ್, ಕ್ಲೇ ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಂತಹ ವಸ್ತುಗಳಿಂದ ರಚಿಸಲಾದ 3D ಶಿಲ್ಪಗಳನ್ನು ಪ್ರದರ್ಶಿಸಲು ಬಾಳಿಕೆ ಬರುವ 3D ಫೈಬರ್ ಶಿಲ್ಪಗಳು, ಅಕ್ರಿಲಿಕ್ ಬೋರ್ಡ್‌ಗಳು, ಗಾಜು ಮತ್ತು ಸಂಯೋಜಿತ ಬೆಳಕಿನೊಂದಿಗೆ ಇವುಗಳನ್ನು ವಿನ್ಯಾಸಗೊಳಿಸಬೇಕಿತ್ತು. ಸ್ಥಾಪನೆಗಳು ಸ್ಕಿಲ್ ಇಂಡಿಯಾ, ಉಜ್ವಲ ಯೋಜನೆ ಮತ್ತು ಚಂದ್ರಯಾನ ಮಿಷನ್‌ನಂತಹ ಕೇಂದ್ರೀಯ ಉಪಕ್ರಮಗಳನ್ನು ಉತ್ತೇಜಿಸುತ್ತವೆ.

ಅಕ್ಟೋಬರ್‌ನಲ್ಲಿ, ರಕ್ಷಣಾ ಸಚಿವಾಲಯವು ತನ್ನ ಎಲ್ಲಾ ಇಲಾಖೆಗಳಿಗೆ ಇಲಾಖೆಯು ಮಾಡಿದ ಕೆಲಸವನ್ನು ಹೈಲೈಟ್ ಮಾಡಲು 822 ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲು ಮಾರ್ಗಸೂಚಿಗಳನ್ನು ನೀಡಿತ್ತು ಮತ್ತು ಇದು ಪ್ರಧಾನಿಯವರ ಫೋಟೋಗಳನ್ನು ಒಳಗೊಂಡಿರಬಹುದು ಎಂದು ಹೇಳಿದೆ. ಸೆಲ್ಫಿ ಪಾಯಿಂಟ್‌ಗಳಿಗಾಗಿ ಸೂಚಿಸಲಾದ ಸ್ಥಳಗಳಲ್ಲಿ ಯುದ್ಧ ಸ್ಮಾರಕಗಳು, ವಸ್ತುಸಂಗ್ರಹಾಲಯಗಳು, ಸಾರ್ವಜನಿಕ ಸಾರಿಗೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಮಾರುಕಟ್ಟೆಗಳು, ಶಾಲೆಗಳು ಮತ್ತು ಕಾಲೇಜುಗಳು ಮತ್ತು ಪ್ರವಾಸಿ ತಾಣಗಳು ಸೇರಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT