ದೇಶ

ಯೂಟ್ಯೂಬ್ ನೋಡಿ ಎಟಿಎಂ ಗೆ ಕನ್ನ ಹಾಕಲು ಯತ್ನಿಸಿದ ಯುವಕನ ಬಂಧನ!

Srinivas Rao BV

ರಾಂಚಿ: ಯೂಟ್ಯೂಬ್ ವಿಡಿಯೋ ನೋಡಿ ಎಟಿಎಂ ವಂಚನೆಗೆ ಪ್ರಯತ್ನಿಸಿದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. 

ಜಾರ್ಖಂಡ್ ನಲ್ಲಿ ಈ ಘಟನೆ ವರದಿಯಾಗಿದೆ. ಬಿಹಾರ ಮೂಲದ ಯುವಕನೋರ್ವ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿ, ಎಟಿಎಂ ನಿಂದ ಹಣ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 

ಗಯಾದ ಸಂಜೀವ್ ಕುಮಾರ್ ಬಂಧಿತ ಯುವಕನಾಗಿದ್ದು, ಸುಲಭ ಹಾಗೂ ಶೀಘ್ರವಾಗಿ ಹಣ ಮಾಡುವ ಉದ್ದೇಶದಿಂದ ಈ ಕೃತ್ಯಕ್ಕೆ ಕೈ ಹಾಕಿದ್ದಾಗಿ ತಿಳಿಸಿದ್ದಾನೆ. ತಾನೂ ಹಾಗೂ ತನ್ನ ಸ್ನೇಹಿತ ಯೂಟ್ಯೂಬ್ ನಲ್ಲಿ ಎಟಿಎಂ ಫ್ರಾಡ್ ಡೆಲ್ಲಿ ಶಾಟ್ಸ್ ಎಂಬ ಹೆಸರಿನ ಎಟಿಎಂ ದರೋಡೆ ವೀಡಿಯೋಗಳನ್ನು ನೋಡಿ ಕಲಿತಿದ್ದಾಗಿ ಆರೋಪಿ ತಿಳಿಸಿದ್ದಾನೆ.

“ಸಂಜೀವ್ ಕುಮಾರ್ ಬಿಹಾರಕ್ಕೆ ಸೇರಿದವರು, ಅವರು ಇನ್ನೊಬ್ಬ ಯುವಕ ಸಂಜಯ್ ಕುಮಾರ್ ಸಿಂಗ್ ಅವರೊಂದಿಗೆ ಸಂಪರ್ಕಕ್ಕೆ ಬಂದರು ಮತ್ತು ತ್ವರಿತವಾಗಿ ಮತ್ತು ಸುಲಭವಾಗಿ ಹಣವನ್ನು ಹೇಗೆ ಪಡೆಯುವುದು ಎಂಬುದನ್ನು ಕಂಡುಕೊಳ್ಳುವ ಮಾರ್ಗಗಳ ಕುರಿತು ಕೆಲಸ ಮಾಡಲು ಪ್ರಾರಂಭಿಸಿದರು. "ಎಟಿಎಂ ವಂಚನೆ ದೆಹಲಿ ಶಾಟ್ಸ್”, ಇದು ವಂಚನೆಯ ಬಗ್ಗೆ ವಿವರವಾಗಿ ವಿವರಿಸುವ ಯೂಟ್ಯೂಬ್‌ನಲ್ಲಿ ಲಭ್ಯವಿದೆ,” ಎಂದು ಗಿರಿದಿಹ್ ಎಸ್‌ಪಿ ದೀಪಕ್ ಕುಮಾರ್ ಶರ್ಮಾ ಹೇಳಿದ್ದಾರೆ.

SCROLL FOR NEXT