ದೇಶ

'ಕೆಲವರು' ಹಿಂದೂ-ಮುಸ್ಲಿಂರನ್ನು ವಿಭಜಿಸಿದ್ದಾರೆ: ಗುಜರಾತ್‌ ಬಿಜೆಪಿ ಶಾಸಕ

Lingaraj Badiger

ಅಹಮದಾಬಾದ್‌: ಹಿಂದೂಗಳು ಮತ್ತು ಮುಸ್ಲಿಮರು ಒಂದೇ ಕುಟುಂಬವಾಗಿ ಬದುಕುತ್ತಿದ್ದರು. ಆದರೆ ಈಗ ಅವರನ್ನು 'ಕೆಲವರು' ವಿಭಜಿಸಿದ್ದಾರೆ ಎಂದು ಗುಜರಾತ್‌ನ ಬಾಪುನಗರದ ಬಿಜೆಪಿ ಶಾಸಕ ದಿನೇಶ್ ಕುಶ್ವಾಹ ಅವರು ಶನಿವಾರ ಹೇಳಿದ್ದಾರೆ.

ಅಹಮದಾಬಾದ್‌ನ ಬಾಪುನಗರ ಪ್ರದೇಶದಲ್ಲಿ ಮುಸ್ಲಿಂ ಧಾರ್ಮಿಕ ಸಂಘಟನೆಯೊಂದು ಆಯೋಜಿಸಿದ್ದ ಇತಿಹಾದ್-ಎ-ಮಿಲ್ಲತ್ ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದ ಕುಶ್ವಾಹ, "ಇಲ್ಲಿ ಕುಳಿತಿರುವ ಅನೇಕ ಮುಸ್ಲಿಮರು ಉತ್ತರ ಪ್ರದೇಶದವರು" ಎಂದು ಹೇಳಿದರು.

"ಉತ್ತರ ಪ್ರದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದಾರೆ. ಅದು ನಮ್ಮ ಸಂಸ್ಕೃತಿ ಮತ್ತು ನಾವು ಆ ರೀತಿ ಬದುಕುತ್ತಿದ್ದೆವು. ಆದರೆ ಕೆಲವರು ನಮ್ಮನ್ನು ವಿಭಜನೆ ಮಾಡಿದ್ದಾರೆ" ಬಿಜೆಪಿ ಶಾಸಕ ಹೇಳಿದ್ದಾರೆ.

ಕುಶ್ವಾಹ ಅವರ ಈ ಹೇಳಿಕೆಗೆ 'ಸೆಕ್ಯುಲರ್' ಹಾಗೂ ಹಿಂದುತ್ವ ಬ್ರಿಗೇಡ್‌ನಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅಮಿತ್ ಚಾವ್ಡಾ ಅವರು, ಕುಶ್ವಾಹ ಅವರ ಈ ಹೇಳಿಕೆ ಬಿಜೆಪಿ ಅಧಿಕಾರಕ್ಕೆ ಬರಲು ಕೋಮು ರಾಜಕಾರಣ ಮಾಡಿದ್ದನ್ನು ಒಪ್ಪಿಕೊಂಡಿದೆ ಎಂದು ಕಿಡಿಕಾರಿದ್ದಾರೆ.

ತಮ್ಮದೇ ಪಕ್ಷ ಇಡೀ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ. ಧರ್ಮ ಮತ್ತು ಜಾತಿ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಸಾರ್ವಜನಿಕ ವೇದಿಕೆಯಲ್ಲಿ ಒಪ್ಪಿಕೊಂಡಿದ್ದಾರೆ. ಬಿಜೆಪಿ ನಾಯಕರ ಹಿಡನ್ ಅಜೆಂಡಾವನ್ನು ಬಿಜೆಪಿ ನಾಯಕರೇ ಬಯಲು ಮಾಡಿದ್ದಾರೆ" ಎಂದು ಕಾಂಗ್ರೆಸ್ ನಾಯಕ ವಾಗ್ದಾಳಿ ನಡೆಸಿದ್ದಾರೆ.

SCROLL FOR NEXT