ದೇಶ

ಭಗವಾನ್ ರಾಮ ಹಿಂದೂಗಳಿಗೆ ಮಾತ್ರ ಸೇರಿದವನಲ್ಲ: ಫಾರೂಕ್ ಅಬ್ದುಲ್ಲಾ

Srinivas Rao BV

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶ್ರಮಿಸುತ್ತಿರುವವರಿಗೆ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಭಾರತದಲ್ಲಿ ಭಾತೃತ್ವ ಕಡಿಮೆಯಾಗುತ್ತಿದೆ ಅದನ್ನು ಮರುಸ್ಥಾಪಿಸುವ ಅಗತ್ಯವಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. 

ಎಎನ್ಐ ಜೊತೆ ಮಾತನಾಡಿದ ಜಮ್ಮು-ಕಾಶ್ಮೀರದ ಮಾಜಿ ಸಿಎಂ, ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ದೇವಾಲಯ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.  ಭಗವಾನ್ ರಾಮ ಹಿಂದೂಗಳಿಗೆ ಮಾತ್ರ ಸೇರಿಲ್ಲ. ಆತ ಜಗತ್ತಿನ ಎಲ್ಲರಿಗೂ ಸೇರಿದವ ಎಂದು ಹೆಳಿದ್ದಾರೆ. 

ಭಗವಾನ್ ರಾಮ ಭ್ರಾತೃತ್ವ, ಪ್ರೀತಿ, ಏಕತೆ ಮತ್ತು ಪರಸ್ಪರ ಸಹಾಯದ ಸಂದೇಶ ನೀಡಿದ್ದಾರೆ. ದೇಶದಲ್ಲಿಂದು ಭ್ರಾತೃತ್ವದ ಭಾವನೆ ಕ್ಷೀಣಿಸುತ್ತಿದ್ದು, ನಾವು ಅದನ್ನು ಉಳಿಸಿಕೊಳ್ಳಬೇಕಿದೆ ಎಂದು ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ಭಗವಾನ್ ರಾಮನ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

SCROLL FOR NEXT