ದೇಶ

ಮಧ್ಯ ಪ್ರದೇಶ: ಕ್ರಿಕೆಟ್ ಪಂದ್ಯದ ವೇಳೆ ಹೃದಯಾಘಾತ; 22 ವರ್ಷದ ವ್ಯಕ್ತಿ ಸಾವು

Ramyashree GN

ಖಾರ್ಗೋನ್: ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹಳ್ಳಿಯೊಂದರಲ್ಲಿ 22 ವರ್ಷದ ವ್ಯಕ್ತಿಯೊಬ್ಬರು ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಖಾರ್ಗೋನ್ ಜಿಲ್ಲೆಯ ಬಲ್ವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಕೂಟ್ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಇಂದಲ್ ಸಿಂಗ್ ಜಾಧವ್ ಬಂಜಾರಾ ಅವರು ಅಸ್ವಸ್ಥರಾಗಿದ್ದರು ಎಂದು ಅವರು ಹೇಳಿದರು.

ಬಂಜಾರಾ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆತರಲಾಯಿತು ಎಂದು ಬದ್ವಾಹ್ ಸಿವಿಲ್ ಆಸ್ಪತ್ರೆಯ ಡಾ ವಿಕಾಸ್ ತಲ್ವೇರ್ ಹೇಳಿದ್ದಾರೆ.

ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು.

ಬಂಜಾರಾ ಅವರನ್ನು ಆಸ್ಪತ್ರೆಗೆ ಕರೆತಂದ ಜನರು ಪಂದ್ಯದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತು ಎಂದು ಹೇಳಿದ್ದಾಗಿ ಡಾ. ತಲ್ವೇರ್ ಹೇಳಿದ್ದಾರೆ.

ಜಾಧವ್ ಬಂಜಾರಾ ಅವರು ಬೌಲಿಂಗ್ ಮಾಡುವಾಗ ಎದೆನೋವು ಎಂದು ದೂರಿದರು ಮತ್ತು ಮರದ ಕೆಳಗೆ ಕುಳಿತರು. ತಂಡವು ಗೆದ್ದ ನಂತರ, ಬಂಜಾರಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅಲ್ಲಿಂದ ಅವರನ್ನು ಬದ್ವಾಹ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಮಾರ್ಗಮಧ್ಯದಲ್ಲಿ ಮೃತಪಟ್ಟರು ಎಂದು ಗ್ರಾಮಸ್ಥರಾದ ಶಾಲಿಗ್ರಾಮ್ ಗುರ್ಜಾರ್ ಹೇಳಿದರು.

SCROLL FOR NEXT