ರಾಜೀವ್ ಮತ್ತು ಇಂದಿರಾ ಗಾಂಧಿ 
ದೇಶ

ಹುತಾತ್ಮ ಪಟ್ಟ ಗಾಂಧಿ ಕುಟುಂಬದ ಏಕಸ್ವಾಮ್ಯವಲ್ಲ; ಇಂದಿರಾ, ರಾಜೀವ್ ಹತ್ಯೆ ಆಕಸ್ಮಿಕ ಅಷ್ಟೇ: ಉತ್ತರಾಖಂಡ ಸಚಿವ

ಹುತಾತ್ಮ ಪಟ್ಟ ಗಾಂಧಿ ಕುಟುಂಬದ ಏಕಸ್ವಾಮ್ಯವಲ್ಲ; ಇಂದಿರಾಗಾಂಧಿ ಹಾಗೂ ರಾಜೀವ್‌ಗಾಂಧಿಯವರ ಹತ್ಯೆ ಪ್ರಕರಣಗಳು ಆಕಸ್ಮಿಕ ಎಂದು ಉತ್ತರಾಖಂಡ ಸಚಿವ ಗಣೇಶ್ ಜೋಶಿ ಹೇಳಿದ್ದಾರೆ.

ಡೆಹ್ರಾಡೂನ್: ಹುತಾತ್ಮ ಪಟ್ಟ ಗಾಂಧಿ ಕುಟುಂಬದ ಏಕಸ್ವಾಮ್ಯವಲ್ಲ; ಇಂದಿರಾಗಾಂಧಿ ಹಾಗೂ ರಾಜೀವ್‌ಗಾಂಧಿಯವರ ಹತ್ಯೆ ಪ್ರಕರಣಗಳು ಆಕಸ್ಮಿಕ ಎಂದು ಉತ್ತರಾಖಂಡ ಸಚಿವ ಗಣೇಶ್ ಜೋಶಿ ಹೇಳಿದ್ದಾರೆ.

ಇಂದಿರಾ ಗಾಂಧಿ ಹಾಗೂ ರಾಜೀವ್​ಗಾಂಧಿ ಹತ್ಯೆಯಾಗಿರುವುದನ್ನು ಹುತಾತ್ಮರಾಗಿದ್ದಾರೆ ಎನ್ನಲು ಸಾಧ್ಯವಿಲ್ಲ ಇದೊಂದು ಅಪಘಾತವಷ್ಟೇ ಎಂದಿದ್ದಾರೆ. ತ್ಯಾಗ ಕೇವಲ ಇಂದಿರಾಗಾಂಧಿ ಕುಟುಂಬಕ್ಕೆ ಸೇರಿದ್ದಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್, ಸಾವರ್ಕರ್, ಚಂದ್ರಶೇಖರ್ ಆಜಾದ್ ಮುಂತಾದವರು ಬಲಿದಾನ ಮಾಡಿದ್ದಾರೆ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯವರ ಹತ್ಯೆ ತ್ಯಾಗವಲ್ಲ, ಅಪಘಾತ. ತ್ಯಾಗಕ್ಕೂ ಅಪಘಾತಕ್ಕೂ ವ್ಯತ್ಯಾಸವಿದೆ ಎಂದಿದ್ದಾರೆ.

ರಾಹುಲ್‌ಗಾಂಧಿಯವರ ಬುದ್ಧಿವಂತಿಕೆ ಬಗ್ಗೆ ನನಗೆ ಅನುಕಂಪ ಇದೆ. ಹುತಾತ್ಮ ಪಟ್ಟ ಗಾಂಧಿ ಕುಟುಂಬದ ಏಕಸ್ವಾಮ್ಯವಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್, ಸಾವರ್ಕರ್, ಚಂದ್ರಶೇಖರ್ ಆಜಾದ್ ಅವರಂಥ ಹಲವು ಮಂದಿ ಹುತಾತ್ಮರಾಗಿದ್ದಾರೆ. ಗಾಂಧಿ ಕುಟುಂಬದ ಸದಸ್ಯರ ಹತ್ಯೆ ಆಕಸ್ಮಿಕಗಳು. ಇಂಥ ಆಕಸ್ಮಿಕ ಹಾಗೂ ಹುತಾತ್ಮತೆಗೆ ವ್ಯತ್ಯಾಸವಿದೆ" ಎಂದು ಜೋಶಿ ವಿವರಿಸಿದ್ದಾರೆ.

ರಾಹುಲ್‌ಗಾಂಧಿಯವರ ಭಾರತ್ ಜೋಡೊ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಸೂತ್ರವಾಗಿ ಮುಕ್ತಾಯಗೊಂಡಿದೆ ಎಂದಾದರೆ ಅದರ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು ಎಂದು ಕೃಷಿ, ರೈತಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತ ಸೈನಿಕ ಕಲ್ಯಾಣ ಖಾತೆಯ ರಾಜ್ಯಸಚಿವರಾದ ಜೋಶಿ ಬಣ್ಣಿಸಿದರು.

ಕಾಶ್ಮೀರಕ್ಕೆ ಸಂಬಂಧಿಸಿದ 370 ನೇ ವಿಧಿಯನ್ನು ರದ್ದುಗೊಳಿಸದಿದ್ದರೆ, ಅಲ್ಲಿ ಸಹಜ ಸ್ಥಿತಿ ಮರಳುತ್ತಿರಲಿಲ್ಲ ಎಂದು ಅವರು ಹೇಳಿದರು. ಶಾಂತಿಯುತ ವಾತಾವರಣದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಗಾಂಧಿ ಭೇಟಿ ನೀಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಇದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು. 370 ನೇ ವಿಧಿಯನ್ನು ತೆಗೆದುಹಾಕದಿದ್ದರೆ, ವಾತಾವರಣ ಸರಿಯಾಗುತ್ತಿರಲಿಲ್ಲ ಮತ್ತು ರಾಹುಲ್ ಗಾಂಧಿಯವರು ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಸಾಧ್ಯವಿಲ್ಲ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯು ತಮ್ಮ ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿಯವರ ಹತ್ಯೆಯ ಸುದ್ದಿ ಕೇಳಿದಾಗ ನಾನು ತುಂಬಾ ದುಃಖಿತನಾಗಿದ್ದೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಮೋದಿ, ಅಮಿತ್ ಶಾ, ಬಿಜೆಪಿ, ಆರ್‌ಎಸ್‌ಎಸ್‌ಗೆ ಆ ನೋವು ಗೊತ್ತಿಲ್ಲ. ಒಬ್ಬ ಸೈನಿಕನ ಕುಟುಂಬಕ್ಕೆ ಅರ್ಥವಾಗುತ್ತದೆ, ಪುಲ್ವಾಮಾದಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಸಿಬ್ಬಂದಿಯ ಕುಟುಂಬಕ್ಕೆ ಅರ್ಥವಾಗುತ್ತದೆ, ಕಾಶ್ಮೀರಿಗಳು ಅರ್ಥಮಾಡಿಕೊಳ್ಳುತ್ತಾರೆ ಎಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT