ದೇಶ

ಮುಖ್ಯಮಂತ್ರಿ ಭಗವಂತ ಮಾನ್ ನೇತೃತ್ವದಲ್ಲಿ ಪಂಜಾಬ್‌ನ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದೆ: ಅರವಿಂದ ಕೇಜ್ರಿವಾಲ್

Ramyashree GN

ನವದೆಹಲಿ: ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನೇತೃತ್ವದಲ್ಲಿ ಪಂಜಾಬ್‌ನ ಕಾನೂನು ಮತ್ತು ಸುವ್ಯವಸ್ಥೆ ಭಾರಿ ಸುಧಾರಣೆಯನ್ನು ಕಂಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.

ಮಾನ್ ಅಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೇಗೆ ಸುಧಾರಿಸಿದೆ ಎಂಬ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿದ ಕೇಜ್ರಿವಾಲ್, ಹಿಂದಿನ ದರೋಡೆಕೋರರಿಗೆ ರಾಜಕೀಯ ರಕ್ಷಣೆ ಇತ್ತು ಆದರೆ ಈಗ ಆ ಸನ್ನಿವೇಶ ಬದಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

'ನಾವು ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದಾಗ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ದರೋಡೆಕೋರರು ಮತ್ತು ಅಪರಾಧಿಗಳು ಬಹಿರಂಗವಾಗಿ ರಾಜಕೀಯ ರಕ್ಷಣೆಯನ್ನು ಹೊಂದಿದ್ದರು. ಪಂಜಾಬಿನ ಜನರೊಂದಿಗೆ ಭಗವಂತ್ ಮಾನ್ ಜಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಿದ್ದಾರೆ. ಈಗ ಯಾವುದೇ ದರೋಡೆಕೋರ ಅಥವಾ ಕ್ರಿಮಿನಲ್‌ಗೆ ರಾಜಕೀಯ ರಕ್ಷಣೆ ಇಲ್ಲ' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರಸ್ತುತ ದೆಹಲಿ ಮತ್ತು ಪಂಜಾಬ್ ಎರಡರಲ್ಲೂ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿದೆ.

SCROLL FOR NEXT