ದೇಶ

ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಆರ್‌ಬಿಐ, ಸೆಬಿಗೆ ಕಾಂಗ್ರೆಸ್‌ನ ಜೈರಾಮ್ ರಮೇಶ್ ಪತ್ರ

Ramyashree GN

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರಿಗೆ ಪತ್ರ ಬರೆದಿದ್ದು, ಅದಾನಿ ಗ್ರೂಪ್ ವಿರುದ್ಧದ ಹಣಕಾಸು ಅಕ್ರಮಗಳು ಮತ್ತು ಸ್ಟಾಕ್ ಮ್ಯಾನಿಪುಲೇಷನ್ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದಾರೆ.

ದಾಸ್ ಅವರಿಗೆ ಬುಧವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಪತ್ರದಲ್ಲಿ, ಅದಾನಿ ಗ್ರೂಪ್‌ನ ಸದ್ಯದ 'ಅತಿಯಾದ ಸಾಲದ ಮಾನ್ಯತೆ' ಮತ್ತು ಭವಿಷ್ಯದಲ್ಲಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಸ್ಥಿರಗೊಳಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ರಮೇಶ್ ಆರ್‌ಬಿಐಗೆ ಒತ್ತಾಯಿಸಿದ್ದಾರೆ.

ಅದಾನಿ ಗ್ರೂಪ್ ತನ್ನ ಸ್ಟಾಕ್‌ನ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಿದೆ ಮತ್ತು ಆ ಅಧಿಕ ಮೌಲ್ಯದ ಷೇರುಗಳನ್ನು ಒತ್ತೆಯಿಟ್ಟು ಹಣವನ್ನು ಸಂಗ್ರಹಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ಇದರಿಂದಾಗಿ, ಇತ್ತೀಚೆಗೆ ಷೇರುಗಳ ಮೌಲ್ಯ ತೀವ್ರವಾಗಿ ಕುಸಿಯುತ್ತಾ ಸಾಗಿದೆ. ಅದಾನಿ ಗ್ರೂಪ್‌ಗೆ ಹಣಕಾಸು ಹೂಡಿಕೆ ಮಾಡಿರುವ ಮತ್ತು ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ದುರ್ಬಲತೆಗಳ ಕುರಿತು ತನಿಖೆ ಅಗತ್ಯ ಎಂದು ಕಾಂಗ್ರೆಸ್ ಸಂಸದರು ಫೆಬ್ರುವರಿ 14 ರ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಭಾರತೀಯ ಜೀವ ವಿಮಾ ನಿಗಮ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳು ಇತ್ತೀಚಿನ ವರ್ಷಗಳಲ್ಲಿ ಅದಾನಿ ಗ್ರೂಪ್‌ಗೆ ಅಸಾಧಾರಣವಾಗಿ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿವೆ ಎಂದು ಆರೋಪಿಸಿದ್ದು, ಆರ್‌ಬಿಐ ಆರ್ಥಿಕ ಸ್ಥಿರತೆಗೆ ಆಗುವ ಅಪಾಯಗಳನ್ನು ತನಿಖೆಗೊಳಪಡಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಹಣಕಾಸು ವ್ಯವಸ್ಥೆಯ ಮೇಲ್ವಿಚಾರಕರಾಗಿ, ಆರ್‌ಬಿಐ ಭಾರತದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ರಕ್ಷಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಬೇಕು ಮತ್ತು ಭಾರತದ ತೆರಿಗೆದಾರರು 'ದುರಾಡಳಿತ' ಮತ್ತು ಸಂಭಾವ್ಯ ' ಬೆಲೆಯನ್ನು ಪಾವತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ ಎಂದು ದಾಸ್ ಅವರಿಗೆ ಪತ್ರ ಬರೆದಿದ್ದಾರೆ 

ಸೆಬಿ ಮುಖ್ಯಸ್ಥ ಬುಚ್‌ಗೆ ಕೂಡ ಟ್ವಿಟರ್‌ನಲ್ಲಿ ತಮ್ಮ ಪತ್ರವನ್ನು ಪೋಸ್ಟ್ ಮಾಡಿದ್ದು, ಅದಾನಿ ಗ್ರೂಪ್ ಕಡಲಾಚೆಯ ಶೆಲ್ ಘಟಕಗಳ ವ್ಯಾಪಕ ಚಕ್ರವ್ಯೂಹದ ಮೂಲಕ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆಯಲ್ಲಿ ತೊಡಗಿಸಿಕೊಂಡಿದೆ ಎಂಬ ಆರೋಪಗಳಿಂದ ಅನೇಕ ಭಾರತೀಯ ನಾಗರಿಕರು ವಿಚಲಿತರಾಗಿದ್ದಾರೆ. ಎಲ್ಲಾ ಸಂಭಾವ್ಯ ಉಲ್ಲಂಘನೆಗಳನ್ನು ತನಿಖೆ ಮಾಡಲು ಮತ್ತು ಅದಾನಿ ಗ್ರೂಪ್ ಕಂಪನಿಗಳಲ್ಲಿ ಯಾರು ಹೂಡಿಕೆ ಮಾಡುತ್ತಿದ್ದಾರೆ ಎಂಬುದರ ಕುರಿತು ಸಂಪೂರ್ಣ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ ಎಂದು ರಮೇಶ್ ಹೇಳಿದ್ದಾರೆ.

SCROLL FOR NEXT