ಭಗವಂತ್ ಮಾನ್ 
ದೇಶ

ಜನರಿಂದ ಚುನಾಯಿತರಾದವರು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಆಯ್ಕೆ ಆದವರಲ್ಲ: ಸಿಎಂ ಭಗವಂತ ಮಾನ್

ಪಂಜಾಬ್ ಗವರ್ನರ್ ಬನ್ವಾರಿಲಾಲ್ ಪುರೋಹಿತ್ ಅವರು ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ, 'ಜನರಿಂದ ಚುನಾಯಿತರಾದವರು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಆಯ್ಕೆಯಾದವರಲ್ಲ' ಎಂದು ಮಾನ್ ತಿರುಗೇಟು ನೀಡಿದ್ದಾರೆ.

ಚಂಡೀಗಢ: ಪಂಜಾಬ್ ಗವರ್ನರ್ ಬನ್ವಾರಿಲಾಲ್ ಪುರೋಹಿತ್ ಅವರು ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು 'ತಮ್ಮ ಇಚ್ಛೆ ಮತ್ತು ಅಭಿಲಾಷೆಗಳ ಪ್ರಕಾರ ಆಡಳಿತ ನಡೆಸುತ್ತಿದ್ದಾರೆಯೇ ಹೊರತು ಸಂವಿಧಾನದ ಪ್ರಕಾರವಲ್ಲ' ಎಂದು ವಾಗ್ದಾಳಿ ನಡೆಸಿದ ಒಂದು ದಿನದ ನಂತರ, 'ಜನರಿಂದ ಚುನಾಯಿತರಾದವರು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಆಯ್ಕೆಯಾದವರಲ್ಲ' ಮಾನ್ ತಿರುಗೇಟು ನೀಡಿದ್ದಾರೆ.

ತರಬೇತಿಗಾಗಿ ಶಿಕ್ಷಕರನ್ನು ಸಿಂಗಾಪುರಕ್ಕೆ ಕಳುಹಿಸುವ ವಿಧಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪುರೋಹಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಎತ್ತಿರುವ ಪ್ರಶ್ನೆಗಳಿಗೆ ಮಾನ್ ಎಂದಿಗೂ ಉತ್ತರಿಸಿಲ್ಲ ಎಂದು ಆರೋಪಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. 15 ದಿನಗಳಲ್ಲಿ ಮಾನ್ ಅವರಿಗೆ ಉತ್ತರಿಸದಿದ್ದರೆ, ಮುಂದಿನ ಕ್ರಮಕ್ಕಾಗಿ ಕಾನೂನು ಸಲಹೆಯನ್ನು ತೆಗೆದುಕೊಳ್ಳಲಾಗುವುದು ಪುರೋಹಿತ್ ಹೇಳಿದ್ದಾರೆ.

ರಾಜ್ಯಪಾಲರಿಗೆ ಪತ್ರ ಬರೆದಿರುವ ಮಾನ್, 'ರಾಜ್ಯದ ನಿವಾಸಿಗಳಿಗೆ ರಾಜ್ಯಪಾಲರ ನೇಮಕದ ಮಾನದಂಡಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವಾಗ, ಕೇಂದ್ರ ಸರ್ಕಾರವು ಅಂತಹ ನೇಮಕಾತಿಗಳನ್ನು ಹೇಗೆ ಮಾಡುತ್ತದೆ ಎಂದು ಕೇಳಲು ಬಯಸುತ್ತಾರೆ'. ಸಿಂಗಾಪುರಕ್ಕೆ ಪ್ರಾಂಶುಪಾಲರನ್ನು ಕಳುಹಿಸುವ ಕುರಿತು ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ಮೊದಲು, ರಾಜ್ಯಪಾಲರು ಈ ಹುದ್ದೆಗೆ ವ್ಯಕ್ತಿಯನ್ನು ನೇಮಿಸಲು ಕೇಂದ್ರವು ಅಳವಡಿಸಿಕೊಂಡಿರುವ ಮಾನದಂಡಗಳ ಕುರಿತು ವಿವರಿಸಬೇಕು ಎಂದು ಹೇಳಿದ್ದಾರೆ.

ಪಂಜಾಬ್ ಮಾಹಿತಿ ಮತ್ತು ಸಂವಹನ ಮತ್ತು ತಂತ್ರಜ್ಞಾನ ಕಾರ್ಪೊರೇಷನ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಗುರಿಂದರ್‌ಜಿತ್ ಸಿಂಗ್ ಜವಾಂಡಾ ಅವರ ನೇಮಕದ ಕುರಿತು ರಾಜ್ಯಪಾಲರು ಮತ್ತೊಂದು ದೂರನ್ನು ಉಲ್ಲೇಖಿಸಿದ್ದಾರೆ. ಜವಾಂಡ ಅವರು ಅಪಹರಣ ಮತ್ತು ಆಸ್ತಿ-ದೋಚುವಿಕೆ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದಾರೆ. 'ದಯವಿಟ್ಟು ಪ್ರಕರಣದ ಸಂಪೂರ್ಣ ವಿವರವನ್ನು ನನಗೆ ಕಳುಹಿಸಿ' ಎಂದು ಪುರೋಹಿತ್ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯಪಾಲರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ ಎಲ್ಲಾ ವಿಷಯಗಳು ನ್ಯಾಯವ್ಯಾಪ್ತಿಯ ಅಂಶಗಳಿಗೆ ಸಂಬಂಧಿಸಿವೆ ಎಂದು ಮಾನ್ ಮಂಗಳವಾರ ಹೇಳಿದ್ದಾರೆ. ನಾನು 3 ಕೋಟಿ ಪಂಜಾಬಿಗಳಿಗೆ ಜವಾಬ್ದಾರನಾಗಿದ್ದೇನೆ. ರಾಜ್ಯ ವಿಧಾನಸಭೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪಕ್ಷದ ಶಾಸಕರಿಗೆ ಮನ್ ಅವರು, ಪ್ರಜಾಪ್ರಭುತ್ವದಲ್ಲಿ ಜನರು ಸರ್ವೋಚ್ಚ ಮತ್ತು ಅವರು ಆಯ್ಕೆ ಮಾಡಿದ ಜನರಿಂದ ಸರ್ಕಾರ ನಡೆಯುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT