ದೇಶ

ಅಸಾದುದ್ದೀನ್ ಓವೈಸಿ ಅವರ ದೆಹಲಿ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು

Ramyashree GN

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ತಮ್ಮ ನಿವಾಸದ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸೋಮವಾರ ಆರೋಪಿಸಿದ್ದಾರೆ. ಅಲ್ಲದೆ, 2014 ರಿಂದೀಚೆಗೆ ಇದು ನಾಲ್ಕನೇ ಘಟನೆ ಎಂದಿದ್ದಾರೆ.

ರಾಜಸ್ಥಾನಕ್ಕೆ ಭೇಟಿ ನೀಡಿದ್ದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ, ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ಹೇಳಿದ್ದಾರೆ.

'ನನ್ನ ದೆಹಲಿ ನಿವಾಸದ ಮೇಲೆ ಮತ್ತೆ ದಾಳಿ ನಡೆದಿದೆ. 2014 ರಿಂದ ಇದು ನಾಲ್ಕನೇ ಬಾರಿ ನಡೆದ ದಾಳಿಯಾಗಿದೆ. ಇಂದು ರಾತ್ರಿ ನಾನು ಜೈಪುರದಿಂದ ಹಿಂತಿರುಗಿದೆ ಮತ್ತು ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ಕಿಟಕಿಗಳು ಒಡೆದವು ಎಂದು ನನ್ನ ಮನೆಯ ಸಹಾಯಕರು ತಿಳಿಸಿದರು. ದೆಹಲಿ ಪೊಲೀಸರು ಕೂಡಲೇ ಅವರನ್ನು ಹಿಡಿಯಬೇಕು' ಎಂದು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

'ಇದು 'ಹೈ ಸೆಕ್ಯುರಿಟಿ' ವಲಯ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಸಂಭವಿಸಿರುವುದು ಕಳವಳಕಾರಿಯಾಗಿದೆ. ನಾನು ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ ಮತ್ತು ಅವರು ನನ್ನ ನಿವಾಸವನ್ನು ತಲುಪಿದ್ದಾರೆಟ ಎಂದು ಓವೈಸಿ ಹೇಳಿದರು.

SCROLL FOR NEXT