ಪಿಎಂ ನರೇಂದ್ರ ಮೋದಿ 
ದೇಶ

ಭಾರತದ ಶಕ್ತಿ, ಸಾಮರ್ಥ್ಯ 'ಚಿನ್ನದ ಗಣಿ' ಗಿಂತ ಕಡಿಮೆಯಿಲ್ಲ, ಹಸಿರು ಇಂಧನದಲ್ಲಿ ಇಲ್ಲಿ ಹೂಡಿಕೆ ಮಾಡಿ: ಪ್ರಧಾನಿ ಮೋದಿ ಆಹ್ವಾನ

ನವೀಕರಿಸಬಹುದಾದ ಇಂಧನದಲ್ಲಿ ದೇಶದ ಸಾಮರ್ಥ್ಯವು "ಚಿನ್ನದ ಗಣಿ" ಗಿಂತ ಕಡಿಮೆಯಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಹಸಿರು ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಉದ್ಯಮಿಗಳನ್ನು ಆಹ್ವಾನಿಸಿದ್ದಾರೆ. 

ನವದೆಹಲಿ: ನವೀಕರಿಸಬಹುದಾದ ಇಂಧನದಲ್ಲಿ ದೇಶದ ಸಾಮರ್ಥ್ಯವು "ಚಿನ್ನದ ಗಣಿ" ಗಿಂತ ಕಡಿಮೆಯಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಹಸಿರು ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಉದ್ಯಮಿಗಳನ್ನು ಆಹ್ವಾನಿಸಿದ್ದಾರೆ. 

ಹಸಿರು ಬೆಳವಣಿಗೆಯ ಕುರಿತು 2023-24ರ ಕೇಂದ್ರ ಬಜೆಟ್‌ನಲ್ಲಿ ಮಾಡಿದ ವಿವಿಧ ಘೋಷಣೆಗಳ ಕುರಿತು ವೆಬ್‌ನಾರ್ ನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ಭಾರತವು ಹಸಿರು ಇಂಧನ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಾನು ಭಾರತದಲ್ಲಿ ಹೂಡಿಕೆ ಮಾಡಲು ಎಲ್ಲಾ ಪಾಲುದಾರರನ್ನು ಆಹ್ವಾನಿಸುತ್ತೇನೆ ಎಂದು ಹೇಳಿದರು. 

ಭಾರತದಲ್ಲಿ ಸೌರಶಕ್ತಿ, ಪವನ ಶಕ್ತಿ ಮತ್ತು ಜೈವಿಕ ಅನಿಲದಂತಹ ನವೀಕರಿಸಬಹುದಾದ ಶಕ್ತಿಯ ಸಾಮರ್ಥ್ಯವು ಚಿನ್ನದ ಗಣಿಗಿಂತ ಕಡಿಮೆಯಿಲ್ಲ. ಸರ್ಕಾರವು ಜೈವಿಕ ಇಂಧನದ ಮೇಲೆ ಹೆಚ್ಚು ಗಮನಹರಿಸಿದೆ ಮತ್ತು ಇದು ಹೂಡಿಕೆದಾರರಿಗೆ ಸಾಕಷ್ಟು ಅವಕಾಶವನ್ನು ತರುತ್ತದೆ ಎಂದು ಹೇಳಿದರು.

ನಿಗದಿತ ಸಮಯಕ್ಕಿಂತ ಐದು ತಿಂಗಳ ಮುಂಚಿತವಾಗಿ ಭಾರತವು ಶೇಕಡಾ 10ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು ಸಾಧಿಸುವುದನ್ನು ಅವರು ಉಲ್ಲೇಖಿಸಿದರು. ನಿಗದಿತ ಅವಧಿಗಿಂತ ಒಂಬತ್ತು ವರ್ಷಗಳ ಮುಂಚಿತವಾಗಿ 40 ಪ್ರತಿಶತ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿಯನ್ನು ತಲುಪುವ ಬಗ್ಗೆ ಮಾತನಾಡಿದರು.

2014 ರಿಂದ ಬಜೆಟ್‌ಗಳು ಪ್ರಸ್ತುತ ಸವಾಲುಗಳನ್ನು ಮಾತ್ರ ಪರಿಹರಿಸಿಲ್ಲ. ಹೊಸ ಯುಗದ ಸುಧಾರಣೆಗಳನ್ನು ಹೆಚ್ಚಿಸಿವೆ ಎಂದು ಹೇಳಿದರು. 

ಭಾರತವು ವಾರ್ಷಿಕವಾಗಿ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆಯ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಅಡಿಯಲ್ಲಿ ಖಾಸಗಿ ವಲಯಕ್ಕೆ 19 ಸಾವಿರ ಕೋಟಿ ಪ್ರೋತ್ಸಾಹವನ್ನು ನೀಡುತ್ತದೆ. ವಾಹನ ಸ್ಕ್ರ್ಯಾಪಿಂಗ್‌ಗೆ ಬಜೆಟ್‌ನಲ್ಲಿ 3 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡುವ ಬಗ್ಗೆ ಮಾತನಾಡಿದ ಅವರು, 15 ವರ್ಷಕ್ಕಿಂತ ಹಳೆಯದಾದ ಸುಮಾರು 3 ಲಕ್ಷ ಸರ್ಕಾರಿ ವಾಹನಗಳನ್ನು ರದ್ದುಗೊಳಿಸಲಾಗುವುದು.

ಭಾರತವು ಬ್ಯಾಟರಿ ಶೇಖರಣಾ ಸಾಮರ್ಥ್ಯವನ್ನು ಗಂಟೆಗೆ 125 ಗಿಗಾವ್ಯಾಟ್‌ಗಳಿಗೆ ಹೆಚ್ಚಿಸಬೇಕಾಗಿದೆ ಎಂದು ಹೇಳಿದರು. ಭಾರತವು 2030 ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಶಕ್ತಿಯನ್ನು ಹೊಂದುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT