ದೇಶ

ಚೀನಾ, ರಷ್ಯಾದಿಂದ 2 ಪ್ಯಾರಾಗಳ ಬದಲಾವಣೆ; ಜಿ-20ಯಿಂದ ಇಲ್ಲ ಜಂಟಿ ಹೇಳಿಕೆ

Srinivas Rao BV

ನವದೆಹಲಿ: ಬೆಂಗಳೂರಿನಲ್ಲಿ ಶನಿವಾರ ಮುಕ್ತಾಯಗೊಂಡ ಜಿ-20 ಆರ್ಥಿಕ ಸಚಿವರ ಸಭೆಯ ಫಲಿತಾಂಶದ ಸಾರಾಂಶವನ್ನು  ಭಾರತ ಪ್ರಕಟಿಸಿದೆ. ಆದರೆ ಸಭೆಯ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಿಲ್ಲ.

ಸದಸ್ಯ ರಾಷ್ಟ್ರಗಳು ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರಿಂದ ಜಿ-20 ಸದಸ್ಯ ರಾಷ್ಟ್ರಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ.

ಜಂಟಿ ಹೇಳಿಕೆಯಿಂದ ಯುದ್ಧ ಎಂಬ ಶಬ್ದವನ್ನು ಬಳೆಕ ಮಾಡಿದ್ದನ್ನು ತೆಗೆದುಹಾಕುವುದಕ್ಕೆ ಚೀನಾ, ರಷ್ಯಾದಿಂದ ಬೇಡಿಕೆ ಇರಲಿಲ್ಲ. ಆದರೆ ಎರಡು ಪ್ಯಾರಗಳನ್ನು ತೆಗೆದುಹಾಕುವಂತೆ ಚೀನಾ, ರಷ್ಯಾಗಳು ಬೇಡಿಕೆ ಇಟ್ಟಿದ್ದವು ಆದ್ದರಿಂದ ಜಂಟಿ ಹೇಳಿಕೆಯನ್ನು ಕೈಬಿಡಲಾಯಿತು ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಮಾಹಿತಿ ನೀಡಿದ್ದಾರೆ.

"ಅಂತರರಾಷ್ಟ್ರೀಯ ನೀತಿ ಸಹಕಾರವನ್ನು ಹೆಚ್ಚಿಸಲು ಮತ್ತು ಜಾಗತಿಕ ಆರ್ಥಿಕತೆಯನ್ನು ಬಲವಾದ, ಸಮರ್ಥನೀಯ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಯನ್ನು ಭದ್ರಪಡಿಸುವತ್ತ ಮುನ್ನಡೆಸಲು ನಾವು ಬದ್ಧರಾಗಿದ್ದೇವೆ" ಎಂದು ಸಾರಾಂಶ ಮತ್ತು ಫಲಿತಾಂಶದಲ್ಲಿ ಭಾರತ ಹೇಳಿದೆ.

SCROLL FOR NEXT