ಅಮೇರಿಕ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್ 
ದೇಶ

ಭಾರತಕ್ಕೆ ಬೆಂಬಲಿಸಲು ಅಗತ್ಯವಿರುವ ಎಲ್ಲವನ್ನೂ ಮಾಡುತ್ತೇವೆ- ಭಾರತದ ಜಿ-20 ಅಧ್ಯಕ್ಷತೆ ಯಶಸ್ವಿಯಾಗಬೇಕು- ಅಮೇರಿಕ

ಭಾರತದ ಜಿ-20 ಅಧ್ಯಕ್ಷತೆ ಯಶಸ್ವಿಯಾಗುವ ನಿಟ್ಟಿನಲ್ಲಿ ಭಾರತದ ಕೆಲಸಗಳನ್ನು ಎಲ್ಲಾ ರೀತಿಯಲ್ಲೂ ಬೆಂಬಲಿಸಲು ಎದುರು ನೋಡುತ್ತಿರುವುದಾಗಿ ಅಮೇರಿಕ ಹೇಳಿದೆ. 

ನವದೆಹಲಿ: ಭಾರತದ ಜಿ-20 ಅಧ್ಯಕ್ಷತೆ ಯಶಸ್ವಿಯಾಗುವ ನಿಟ್ಟಿನಲ್ಲಿ ಭಾರತದ ಕೆಲಸಗಳನ್ನು ಎಲ್ಲಾ ರೀತಿಯಲ್ಲೂ ಬೆಂಬಲಿಸಲು ಎದುರು ನೋಡುತ್ತಿರುವುದಾಗಿ ಅಮೇರಿಕ ಹೇಳಿದೆ. 

ಅಮೇರಿಕ ಸಚಿವ ಆಂಟೋನಿ ಬ್ಲಿಂಕನ್ ಮುಂದಿನ ವಾರ ನವದೆಹಲಿಯಲ್ಲಿ ನಡೆಯಲಿರುವ ವಿದೇಶಾಂಗ ಸಚಿವರ ಸಭೆಯಲ್ಲಿ ಬ್ಲಿಂಕನ್ ಭಾಗಿಯಾಗುತ್ತಿದ್ದಾರೆ. 

ಇದಷ್ಟೇ ಅಲ್ಲದೇ ಕ್ವಾಡ್ ಕೂಟದ ವಿದೇಶಾಂಗ ಸಚಿವರ ಸಭೆಯಲ್ಲೂ ಬ್ಲಿಂಕನ್ ಭಾಗವಹಿಸುತ್ತಿದ್ದು, ನವದೆಹಲಿಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೂ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
 
ಭಾರತ ಡಿ.1, 2022 ರಂದು ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು. ಅಮೇರಿಕಾದ ವಿದೇಶಾಂಗ ಸಚಿವರು ಮಾ.1 ರಿಂದ 3 ವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
 
ಭಾರತದ-20 ಅಧ್ಯಕ್ಷತೆಯ ವರ್ಷದ ಹಿನ್ನೆಲೆಯಲ್ಲಿ ಬ್ಲಿಂಕನ್ ದೆಹಲಿಗೆ ಭೇಟಿ ನೀಡುವುದನ್ನು ಎದುರುನೋಡುತ್ತಿದ್ದಾರೆ. ಭಾರತದ ಅಧ್ಯಕ್ಷತೆ ಯಶಸ್ವಿಯಾಗುವುದಕ್ಕೆ ಅಗತ್ಯವಿರುವ ಎಲ್ಲವನ್ನೂ ಮಾಡಲು ನಾವು ಎದುರುನೋಡುತ್ತಿದ್ದೇವೆ ಎಂದು ಅಮೇರಿಕಾದ ಆರ್ಥಿಕ ಹಾಗೂ ಉದ್ಯಮ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ರಾಮಿನ್ ಟೊಲೌಯಿ ಹೇಳಿದ್ದಾರೆ.

"ಸಾಮಾನ್ಯ ಸವಾಲುಗಳ ಕೊರತೆಯಿಲ್ಲ, ಮತ್ತು ಈ ಸವಾಲುಗಳನ್ನು ಎದುರಿಸಲು ಇತರ G20 ದೇಶಗಳೊಂದಿಗೆ ನಮ್ಮ ಪಾಲುದಾರಿಕೆಯನ್ನು ಗಾಢವಾಗಿಸಲು ನಾವು ಬಯಸುತ್ತೇವೆ" ಎಂದು ಟೊಲೌಯಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್