ದೇಶ

ಮಗನ ಸ್ಮಾರಕ ನಿರ್ಮಿಸಿದ ಹುತಾತ್ಮ ಯೋಧನ ತಂದೆಗೆ ಪೊಲೀಸರಿಂದ ಥಳಿತ, ಬಂಧನ!

Srinivas Rao BV

ಪಾಟ್ನ: 2020 ರ ಗಲ್ವಾನ್ ಕಣಿಗೆ ಘರ್ಷಣೆಯಲ್ಲಿ ಹುತಾತ್ಮರಾದ ಯೋಧನಿಗೆ ಸ್ಮಾರಕ ನಿರ್ಮಿಸಿದ್ದಕ್ಕಾಗಿ ಆತನ ತಂದೆಯನ್ನು ಪೊಲೀಸರು ಥಳಿಸಿ ಬಂಧಿಸಿದ್ದಾರೆ. 

ಸರ್ಕಾರಿ ಜಾಗದಲ್ಲಿ ಸ್ಮಾರಕ ನಿರ್ಮಿಸಿದ್ದಕ್ಕಾಗಿ ಪೊಲೀಸರು ಯೋಧನ ತಂದೆಯನ್ನು ಥಳಿಸಿ ಬಂಧನಕ್ಕೊಳಪಡಿಸಿದ್ದಾರೆ ಎಂದು ಹುತಾತ್ಮ ಯೋಧನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಬಿಹಾರದ ವೈಶಾಲಿಯ ಜಂದಾಹದಲ್ಲಿ ಈ ಘಟನೆ ವರದಿಯಾಗಿದ್ದು ನಿರ್ಮಾಣವಾಗುತ್ತಿದ್ದದ್ದು ಹುತಾತ್ಮ ಯೋಧ ಜೈ ಕಿಶೋರ್ ಸಿಂಗ್ ಅವರದ್ದು ಎಂದು ತಿಳಿದುಬಂದಿದೆ.

ಪೊಲೀಸರ ಪ್ರಕಾರ ಈ ವಿಷಯ ಒತ್ತುವರಿಗೆ ಸಂಬಂಧಪಟ್ಟಿದ್ದಾಗಿದ್ದು, ಇದು ಭೂಮಾಲೀಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. 

2020 ಗಾಲ್ವಾನ್ ವ್ಯಾಲಿ ಘರ್ಷಣೆ ಹುತಾತ್ಮ ಜೈ ಕಿಶೋರ್ ಸಿಂಗ್.

ಹರಿನಾಥ್ ಹಾಗೂ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಪುತ್ಥಳಿಯೊಂದನ್ನು ಸ್ಥಾಪಿಸಲಾಗಿತ್ತು. ಈ ವಿಷಯವಾಗಿ  
ಜ.23 ರಂದು ಎಸ್ ಸಿ/ಎಸ್ ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈ ಬಳಿಕ ಪ್ರತಿಮೆ ಸುತ್ತಲೂ ಗೋಡೆಗಳನ್ನು ನಿರ್ಮಿಸಲಾಗಿತ್ತು. ಆದರೆ ಇದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ. ಪ್ರತಿಮೆಯನ್ನು ಅವರ ಸ್ವಂತ ಜಾಗದಲ್ಲಿ ನಿರ್ಮಿಸಬಹುದಾಗಿತ್ತು. ಅಥವಾ ಸರ್ಕಾರದಿಂದ ಜಾಗ ಪಡೆಯಬಹುದಾಗಿತ್ತು. ಆ ರೀತಿಯಾಗಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಅಕ್ರಮ ಒತ್ತುವರಿಯ ಪರಿಣಾಮ ಭೂಮಾಲೀಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಎಸ್ ಡಿಪಿಒ ಮಹುವಾ ಹೇಳಿದ್ದಾರೆ.

ಸ್ವತಃ ಯೋಧರಾಗಿರುವ ಜೈ ಕಿಶೋರ್ ಸಿಂಗ್ ಅವರ ಸಹೋದರ ಪೊಲೀಸರ ವಿರುದ್ಧ ತಮ್ಮ ತಂದೆಯನ್ನು ಥಳಿಸಿರುವ ಆರೋಪ ಮಾಡಿದ್ದಾರೆ.

SCROLL FOR NEXT